ಅರಸಿನಮಕ್ಕಿಯ ಶ್ರೀ ದುರ್ಗಾ ಕ್ಲಿನಿಕ್‌ಗೆ: ಇಸಿಜಿ ಯಂತ್ರ ಹಸ್ತಾಂತರ ಕಾರ್ಯಕ್ರಮ

ಶೇರ್ ಮಾಡಿ

ನೇಸರ ೧೯: ಅರಸಿನಮಕ್ಕಿಯ ಶ್ರೀ ದುರ್ಗಾ ಕ್ಲಿನಿಕ್‌ಗೆ ಕೆಎಂಸಿಯ ಹೃದ್ರೋಗ ತಜ್ಞರಾದ ಡಾ| ಪದ್ಮನಾಭ ಕಾಮತ್‌ರವರ ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ಸ್ ಫೌಂಡೇಶನ್ ವತಿಯಿಂದ ಅರಸಿನಮಕ್ಕಿಯ ಶ್ರೀ ದುರ್ಗಾ ಕ್ಲಿನಿಕ್‌ನ ವೈದ್ಯೆ ಡಾ| ಹರ್ಷಿತಾ ಸುಮನ್ ರವರಿಗೆ ಇಸಿಜಿ ಯಂತ್ರವನ್ನು ಹಸ್ತಾಂತರಿಸಿದರು. ಇದರಿಂದ ಅರಸಿನಮಕ್ಕಿಯ ಸುತ್ತಲಿನ ಹಳ್ಳಿ ಪ್ರದೇಶದ ಜನರಿಗೆ ಸೇವೆ ದೊರೆಯುವಂತಾಯಿತು. ಡಾ| ಪದ್ಮನಾಭ ಕಾಮತ್‌ರವರ ಹಳ್ಳಿಯ ಜನರ ಮೇಲೆ ಇರುವ ಕಾಳಜಿ ಮತ್ತು ಅವರ ನಿಸ್ವಾರ್ಥ ಸೇವೆಗೆ ವೈದ್ಯೆ ಡಾ| ಹರ್ಷಿತಾ ಸುಮನ್ ರವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ಸ್ ಫೌಂಡೇಶನ್‌ನ ಪ್ರದೀಪ್ ನಾಯಕ್, ಊರಿನ ಪ್ರಮುಖರಾದ ವರದಶಂಕರ ದಾಮ್ಲೆ, ಮುರಳೀಧರ್ ಶೆಟ್ಟಿಗಾರ್, ಕರುಣಾಕರ್ ಶಿಶಿಲ, ರಾಜಗೋಪಾಲ್, ರಾಜು ಕೆ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!