ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಜೊತೆ ಆಧಾರ್ನ್ನು ಲಿಂಕ್ ಮಾಡಲು ಇದೇ ಮಾರ್ಚ್ 31ರ ಗಡುವು ನೀಡಿದೆ. ಒಂದೊಮ್ಮೆ ಲಿಂಕ್ ಮಾಡಲು ತಪ್ಪಿದಲ್ಲಿ ಏಪ್ರಿಲ್ 1, 2023ರಿಂದ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದೆ. ಈ ಕುರಿತ ಅಗತ್ಯ ಮಾಹಿತಿ ಇಲ್ಲಿದೆ.
1.ಮಾರ್ಚ್ 31ರ ನಂತರ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದಾ?
ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದೇ ಇದ್ದಲ್ಲಿ ಏಪ್ರಿಲ್ 1, 2023ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.
2.ಆಧಾರ್-ಪ್ಯಾನ್ ಲಿಂಕ್ ಬಗ್ಗೆ ಆದಾಯ ತೆರಿಗೆ ಇಲಾಖೆ ಹೇಳುವುದೇನು?
“ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ಪ್ಯಾನ್ ಅನ್ನು 31.3.2023ರ ಮೊದಲು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ,” ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
3.ಗಡುವಿನೊಳಗೆ ನಿಮ್ಮ ಪ್ಯಾನ್ಗೆ ಆಧಾರ್ ಅನ್ನು ಲಿಂಕ್ ಮಾಡಲು ವಿಫಲವಾದರೆ ಏನಾಗುತ್ತದೆ?
ಆದಾಯ ತೆರಿಗೆ ಇಲಾಖೆ ನೀಡಿರುವ ಮಾರ್ಚ್ 31, 2023ರ ಗಡುವಿನ ಒಳಗೆ ಪ್ಯಾನ್ ಅನ್ನು ನಿಮ್ಮ ಆಧಾರ್ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ, ನಿಮ್ಮ ಪ್ಯಾನ್ ಏಪ್ರಿಲ್ 1, 2023 ರಿಂದ ನಿಷ್ಕ್ರಿಯಗೊಳ್ಳುತ್ತದೆ ಎಂದು ತೆರಿಗೆ ಇಲಾಖೆ ಹೇಳಿದೆ.
4.ಪ್ಯಾನ್ – ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ ಯಾವುದು?
ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಮಾರ್ಚ್ 31, 2023 ಕೊನೆಯ ದಿನಾಂಕ ಎಂದು ಹೇಳಿದೆ. ಒಂದೊಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅದನ್ನು ವಿವಿಧ ಉದ್ದೇಶಗಳಿಗೆ ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಗಡುವನ್ನು ಈ ಹಿಂದೆ ಹಲವಾರು ಬಾರಿ ವಿಸ್ತರಿಸಲಾಗಿತ್ತು. ಇದೀಗ ಕೊನೆಯದಾಗಿ ಪ್ಯಾನ್ನ್ನು ಮಾರ್ಚ್ 31, 2023ರ ಒಳಗೆ ಆಧಾರ್ಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
5.ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಎಷ್ಟು ಶುಲ್ಕ ತೆರಬೇಕು?
ನೀವು ಇನ್ನೂ ನಿಮ್ಮ ಆಧಾರ್ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡದೇ ಇದ್ದಲ್ಲಿ ಈಗ ನೀವು www.incometax.gov.inಗೆ ಹೋಗಿ 1,000 ರೂ. ಶುಲ್ಕವನ್ನು ಪಾವತಿಸುವ ಲಿಂಕ್ ಮಾಡಬಹುದು. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಕೊನೆಯ ದಿನ ಮಾರ್ಚ್ 31, 2023 ಎಂಬುದನ್ನು ಮರೆಯಬೇಡಿ.
6.ಪ್ಯಾನ್ಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ ಪೋರ್ಟಲ್ https://eportal.incometax.gov.in/iec/foservices/#/pre-login/link-aadhaar-statusಗೆ ಭೇಟಿ ನೀಡಿ, ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಹಾಕಿ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಬಹುದು. ಅದೇ ರೀತಿ ಈ ವೆಬ್ ವಿಳಾಸಕ್ಕೂ ತೆರಳಿ https://www.pan.utiitsl.com/panaadhaarlink/forms/pan.html/panaadhaar ಆಧಾರ್-ಪ್ಯಾನ್ ಲಿಂಕ್ನ ಸ್ಟೇಟಸ್ ಪರಿಶೀಲಿಸಬಹುದು.