PAN-Aadhaar: ಮಾರ್ಚ್‌ 31ಕ್ಕೂ ಮುನ್ನ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಮುಖ್ಯವೇಕೆ? ಹೇಗೆ ಮಾಡುವುದು?

ಶೇರ್ ಮಾಡಿ

ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಸೇರಿದಂತೆ ಸರ್ಕಾರದ ಹಲವಾರು ಸೇವೆಗಳನ್ನು ನಾವು ಪಡೆಯಬೇಕಾದರೆ, ನಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದು ಅತೀ ಮುಖ್ಯವಾಗಿದೆ. ಪ್ರಸ್ತುತ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದಕ್ಕೆ ಕೇಂದ್ರ ಸರ್ಕಾರವು ಮಾರ್ಚ್ 31 ಕೊನೆಯ ದಿನಾಂಕ ಎಂದು ಹೇಳಿದೆ.

ಮಾರ್ಚ್ 31ಕ್ಕೂ ಮುನ್ನ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಮುಖ್ಯವೇಕೆ?

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ (ಸಿಬಿಡಿಟಿ) ಪ್ರಕಾರ ಮಾರ್ಚ್ 31, 2024ಕ್ಕೂ ಮುನ್ನವೇ ಪ್ಯಾನ್ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ನೀವು ಮಾರ್ಚ್ 31ರವರೆಗೆ 1000 ರೂಪಾಯಿ ದಂಡವನ್ನು ಪಾವತಿಸಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು. ಇದಕ್ಕೂ ಮುನ್ನ 500 ರೂಪಾಯಿ ದಂಡವಾಗಿತ್ತು. ಅದಕ್ಕೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕ ಇರಲಿಲ್ಲ.

ಆದಾಯ ತೆರಿಗೆ ಇಲಾಖೆ ಹೇಳುವುದೇನು?

“ಆದಾಯ ತೆರಿಗೆ ಇಲಾಖೆ 1961ರ ಪ್ರಕಾರ ವಿನಾಯಿತಿ ವಿಭಾಗದಲ್ಲಿ ಯಾರು ಇರುವುದಿಲ್ಲ ಅವರನ್ನು ಹೊರತುಪಡಿಸಿ ಪ್ಯಾನ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಮಾರ್ಚ್ 31ಕ್ಕೂ ಮುನ್ನ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಕಡ್ಡಾಯವಾಗಲಿದೆ. ಏಪ್ರಿಲ್ 1, 2023ರಿಂದ ಆಧಾರ್ ಲಿಂಕ್ ಆಗದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಯಾವುದು ಕಡ್ಡಾಯವಾಗಿರುತ್ತದೆಯೋ ಅದು ಅಗತ್ಯ ಕೂಡಾ ಹೌದು. ಆದ್ದರಿಂದ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ವಿಳಂಬ ಮಾಡದಿರಿ,” ಎಂದು ತಿಳಿಸಿದ್ದಾರೆ. ಮಾರ್ಚ್ 31ಕ್ಕೂ ಮುನ್ನ ಪ್ಯಾನ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ನಿಮಗೆ ಯಾವುದೇ ಹಣಕಾಸು ಕಾರ್ಯ ನಡೆಸಲು ತೊಂದರೆಯಾಗಲಿದೆ. ಆಧಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗದು. ಯಾರು ಡೆಡ್‌ಲೈನ್‌ಗೂ ಮುನ್ನ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದಿದ್ದರೆ, ದಂಡವನ್ನು ವಿಧಿಸಲಾಗುತ್ತದೆ.

ಪ್ಯಾನ್-ಆಧಾರ್ ಲಿಂಕ್ ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ – https://incometaxindiaefiling.gov.in/ ಹಂತ
2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ ಹಂತ
3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ ‘Profile Settings’ ಗೆ ಹೋಗಿ, ‘Link Aadhaar’ ಕ್ಲಿಕ್ ಮಾಡಿ ಹಂತ
6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ

Leave a Reply

error: Content is protected !!