ಉಪ್ಪಿನಂಗಡಿ: ಉಪ್ಪಿನಂಗಡಿ ವಿವಾ ಫ್ಯಾಶನ್ ಬಟ್ಟೆ ಮಳಿಗೆಗೆ ಬೆಂಕಿ ಬಿದ್ದಿದ್ದು, ಹೊತ್ತಿ ಉರಿದಿದೆ.
ಬಹು ಮಹಡಿ ಕಟ್ಟಡದ ಒಂದು ಮತ್ತು ಎರಡನೇ ಮಹಡಿಯಲ್ಲಿ ವಿವಾ ಫ್ಯಾಶನ್ ಬಟ್ಟೆ ಶೋರೂಂ ಹೊಂದಿದ್ದು, ಬೆಳಗ್ಗೆ ಇದರೊಳಗಿನಿಂದ ಹೊಗೆ ಬರುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ಈ ಮಹಡಿಯ ನೆಲ ಅಂತಸ್ತಿನಲ್ಲಿ ಸೋನಾ ಅಪ್ಟಿಕಲ್ಸ್, ಆರ್ ಕೆ ಜ್ಯುವೆಲ್ಲರ್ ಸೇರಿದಂತೆ ಹಲವು ಅಂಗಡಿಗಳಿವೆ.
ಸ್ಥಳೀಯರು ಹಾಗೂ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕೆಲಸ ನಡೆದಿದೆ.