ಹನುಮ ಜಯಂತಿ ಪ್ರಯುಕ್ತ ಸಾಮೂಹಿಕ ಹನುಮ ಯಜ್ಞ, ಹನುಮಾನ್ ಚಾಲೀಸ ಪಾರಾಯಣ ಹಾಗೂ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಶೇರ್ ಮಾಡಿ

ಪುತ್ತೂರು: ಹನುಮ ಜಯಂತಿ ಆಚರಣಾ ಸಮಿತಿ ಕೆಮ್ಮಾಯಿ ಹಾಗೂ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ನ ಟೀಮ್ ಒಳಿತು ಮಾಡು ಮನುಷ ತಂಡದಿಂದ ಹನುಮ ಜಯಂತಿಯ ಪ್ರಯುಕ್ತ ಚಿಕ್ಕಮುಡ್ನೂರೂ ಗ್ರಾಮದ ಕೆಮ್ಮಾಯಿ ಭರತಪುರದಲ್ಲಿ,ಊರ ಪರವೂರ ಹನುಮ ಭಕ್ತರ ಸಹಕಾರದಿಂದ ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ “ಸಾಮೂಹಿಕ ಹನುಮಯಜ್ಞ” ಹಾಗೂ ಹನುಮಾನ್ ಚಾಲಿಸಾ ಪಾರಾಯಣವು ವೇದಮೂರ್ತಿ ಶ್ರೀ ಶ್ರೀಕೃಷ್ಣ ಉಪಾಧ್ಯಯರ ಪೌರೋಹಿತ್ಯದಲ್ಲಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮದ ಬಳಿಕ ಟೀಮ್ ಒಳಿತು ಮಾಡು ಮನುಷ ತಂಡದ 22ನೇ ಯೋಜನೆಯಾಗಿ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ, ಕ್ಯಾನ್ಸರ ಹಾಗೂ ಬೆನ್ನುಮೂಳೆ ಮುರಿತ ಕ್ಕೆ ಒಳಗಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಮಂಗಳೂರು ತಾಲೂಕಿನ ಅನಾರೋಗ್ಯ ಪೀಡತರಿಗೆ 66 ಸಾವಿರ ಮೌಲ್ಯದ 66 ಆಹಾರ ಸಾಮಗ್ರಿಗಳ ಕಿಟ್ ನ್ನು ವಿತರಣೆ ಮಾಡಲಾಯಿತು ಹಾಗೂ
ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಮತ್ತು ಧನ್ವಂತರಿ ಕ್ಲಿನಿಕಲ್ ಲ್ಯಾಬ್ ನ ಸಹಯೋಗದಲ್ಲಿ 55 ಜನರಿಗೆ ಉಚಿತ ಮಧು ಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣೆ ಮಾಡಲಾಯಿತು ಹಾಗೂ ಕಿಡ್ನಿ ಸಮಸ್ಯೆ ಯಿಂದ ಬಳಲುತಿರುವ ಬಡಗನ್ನೂರು ನಿವಾಸಿ ಕು.ಅನನ್ಯ ರವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2,750/-ರೂಪಾಯಿಯ ಔಷಧಿ ಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರವೀಣ್ ನಾಯ್ಕ್(ಕೇಬಲ್), ಉಪಾಧ್ಯಕ್ಷರಾದ ಸುಧಾಕರ ನಾಯ್ಕ, ಕೋಶಾಧಿಕಾರಿ ನಾಗೇಶ್ ಇ ಕೆಮ್ಮಾಯಿ, ಜತೆ ಕಾರ್ಯದರ್ಶಿ ಮಂಜುನಾಥ ಕೆಮ್ಮಾಯಿ, ಸಂಘಟನಾ ಕಾರ್ಯದರ್ಶಿ ಅಶೋಕ್ ಪೂಜಾರಿ ಭರತಪುರ, ಲೆಕ್ಕ ಪರಿಶೋಧಕರಾದ ದಿಲೀಪ್ ಭರತಪುರ, ರ್ದೇಶಕರಾದ ಚೇತನ್ ಕುಮಾರ್ ಪುತ್ತೂರು, ಶೋಭಾ ಮಡಿವಾಳ, ಕೃಷ್ಣಪ್ಪ ಶಿವನಗರ, ಮೋಹನ್ ಸಿಂಹವನ, ಶ್ರೀಧರ ಮಡಿವಾಳ, ಕುಸುಮಾವತಿ ಹಾಗೂ ಸದಸ್ಯರಾದ ಸರಸ್ವತಿ ಬನ್ನೂರು, ವಸಂತಿ ಶೀಲಾ ರೋಟರಿಪುರ, ಶೃತಿಕ ಜಾಲ್ಸೂರು, ಸೌಜನ್ಯ ಅರ್ಲಪದವು, ವಿಜಯ್ ಬುಲ್ಲೇರಿ ಕಟ್ಟೆ, ಯಕ್ಷಿತ ಮುಂಡುಗಾರು, ಕಾವ್ಯ ಬನ್ನೂರು, ಸೀತಾ ಭಟ್ ಪಾಣಾಜೆ, ಅಣ್ಣಪ್ಪ ಬನ್ನೂರು ಮತ್ತು ಸ್ಥಳೀಯರಾದ ಪ್ರವೀಣ್ ನಾಯ್ಕ್ ಕೆಮ್ಮಾಯಿ, ಹೇಮಚಂದ್ರ ಕೆ ಮ್ಮಾಯಿ, ಸುರೇಶ್ ಮಡಿವಾಳ, ಪ್ರದೀಪ್ ಭರತ ಪುರ, ಸಂತೋಷ ಕುಮಾರ್ ಶೆಟ್ಟಿ ಬಡಾವು ಉಪಸ್ಥಿತರಿದ್ದರು.

Leave a Reply

error: Content is protected !!