ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಶೇರ್ ಮಾಡಿ

ಪುತ್ತೂರು: “ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ನಾವು ದೇವತಾ ಮನುಷ್ಯರಂತೆ ಕಾಣಬೇಕು, ಅವರು ಸಂವಿಧಾನದ ರಚನೆಯ ಮೂಲಕ ದೇಶದ ಸಮಸ್ತ ಪ್ರಜೆಗಳ ಏಳಿಗೆಗಾಗಿ ಶ್ರಮಿಸಿದ ಭಾರತ ಕಂಡ ಮಹಾನ್ ಚೇತನ” ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಹಿರಿಯ ಶಿಕ್ಷಕರಾದ ರಾಧಾಕೃಷ್ಣ ರೈ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯ ಸಂದರ್ಭದಲ್ಲಿ ನುಡಿದರು.

ಶಾಲಾ ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದಭಾಸ್ಕರ್ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್ಟೇಟ್ ಮ್ಯಾನೇಜರ್ ಚರಣರಾಜ್, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಶಾಲಾ ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

See also  ಡಾ.ಅನುರಾಧಾ ಕುರುಂಜಿಯವರಿಗೆ ಸೈಂಟ್ ಜೋಸೆಫ್ ಶಿಕ್ಷಕ - ರಕ್ಷಕ ಸಂಘದ ವತಿಯಿಂದ ಅಭಿನಂದನಾ ಸಮಾರಂಭ

Leave a Reply

Your email address will not be published. Required fields are marked *

error: Content is protected !!