ಪಟ್ರಮೆಯ ಕಪಿಲಾ ನದಿಯಲ್ಲಿ ತೇಲುತ್ತಿರುವ ನೂರಾರು ಸತ್ತಕೋಳಿಗಳು…..!!!!

ಶೇರ್ ಮಾಡಿ

ನೇಸರ ಜ.2: ಪಟ್ರಮೆಯ ಕಪಿಲಾ ನದಿಯ ಸೇತುವೆ ಬಳಿ ನದಿಗೆ ನಿನ್ನೆ ರಾತ್ರಿ ಹೊತ್ತಿನಲ್ಲಿ ಯಾರೋ ದುಷ್ಕರ್ಮಿಗಳು ನೂರಾರು ಸತ್ತಕೋಳಿಗಳನ್ನು ಎಸೆದು ಹೋಗಿರುವುದು ಜ.2ರ ಬೆಳಗ್ಗೆ ಕಂಡುಬಂದಿದೆ.

ಸೇತುವೆ ಬಳಿಯಿಂದ ಸುಮಾರು ಒಂದು ಕಿಮೀ ತನಕವೂ ಅಲ್ಲಲ್ಲಿ ಸತ್ತ ಕೋಳಿಗಳು ತೇಲುತ್ತಿರುವುದು ಕಂಡು ಬಂದಿತ್ತು.ಈ ಬಗ್ಗೆ ಸಮೀಪದ ಮಸೀದಿಯ ಸಿಸಿ ಕ್ಯಾಮರ ಫೂಟೇಜ್ ಗಳನ್ನು ಪರಿಶೀಲಿಸಿದಾಗ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಟೆಂಪೊ ವಾಹನವೊಂದು ಹಾದುಹೋಗಿರುವುದು ಕಂಡು ಬಂದಿದ್ದು, ಧರ್ಮಸ್ಥಳ ಪೋಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.‌

ಯಾವುದೋ ಕೋಳಿ ಫಾರಂನಲ್ಲಿ ರೋಗದಿಂದ ಸತ್ತ ಕೋಳಿಗಳು ಇದಾಗಿದೆ ಎಂದು ಸಂಶಯಿಸಲಾಗಿದೆ.ಕೋಳಿ ಫಾರಂಗೆ ಪರವಾನಿಗೆ ಪಡೆಯಬೇಕಾದರೆ ತ್ಯಾಜ್ಯವಿಲೇವಾರಿ ಗುಂಡಿ ಮಾಡಿರಲೇಬೇಕಾಗುತ್ತದೆ. ಹಾಗಿದ್ದೂ ಕೂಡ ಹೀಗೆ ಕೊಳೆತ ತ್ಯಾಜ್ಯಗಳನ್ನು ನದಿಗೆ ಎಸೆದು ಪರಿಸರ,ನೀರನ್ನು ಕಲುಷಿತಗೊಳಿಸಲು ಕೊಳೆತ ಮನಸುಗಳಿಗಷ್ಟೇ ಸಾಧ್ಯ.ಸದ್ರಿ ನದಿ ನೀರನ್ನು ಕುಡಿಯಲು ಬಳಸುವ ಕುಟುಂಬಗಳೇ ಬಹಳಷ್ಟಿವೆ. ಇದೀಗ ನೀರಿನ ಬಳಕೆಗೂ ತಡೆಯೊಡ್ಡಿದಂತಾಗಿದೆ.

ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೋಹಿನಿಯವರು ಈ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು,ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸ್ಥಳೀಯರು ಕೂಡಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು,ದುಷ್ಕರ್ಮಿಗಳ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!