ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚಿಲಂಪಾಡಿ ಬೀಡಿನ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಶೇರ್ ಮಾಡಿ

ನೇಸರ ಜ2 :ಸ್ವಸ್ತಿ|| ಶ್ರೀ ಪ್ಲವ ನಾಮ ಸಂವತ್ಸರದ ಧನು ಮಾಸ 25 ಸಲುವ 09 -01 -2022 ನೇ ಆದಿತ್ಯವಾರ “ಇಚಿಲಂಪಾಡಿ -ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ“ದ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ವೈದಿಕ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು .ಆಸ್ತಿಕ ಬಂಧುಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ ,ಕೃತಾರ್ಥರಾಗಬೇಕೆಂದು ಈ ಮೂಲಕ ವಿನಂತಿ .

ಕಾರ್ಯಕ್ರಮಗಳು

ತಾ :08 -01 -2022 ನೇ ಶನಿವಾರ

ಬೆಳಿಗ್ಗೆ ಗಂಟೆ 10 -00 ಕ್ಕೆ : ಊರ ಭಕ್ತಾದಿಗಳಿಂದ
ಹಸಿರು ಹೊರೆ ಕಾಣಿಕೆ ಸಮರ್ಪಣೆ

ತಾ :09 -01 -2022 ನೇ ಆದಿತ್ಯವಾರ

ಮಲ್ಲಿಕಾರ್ಜುನ ಕಲಾ ಸಂಘದ ವತಿಯಿಂದ ಶ್ರೀ ದೇವಿಗೆ ಬೆಳ್ಳಿಯ ಪ್ರಭಾವಳಿ ಅರ್ಪಣೆ

ಬೆಳಿಗ್ಗೆ ಗಂಟೆ 09-00 ಕ್ಕೆ :ದೇವತಾ ಪ್ರಾರ್ಥನೆ ,ಸ್ವಸ್ತಿ ಪುಣ್ಯಾಹ ವಾಚನ ,ಮಹಾಗಣಪತಿ ಹೋಮ ,ಕಲಶ ಪ್ರತಿಷ್ಠೆ ,ನಾಗತಂಬಿಲ

ಗಂಟೆ 11-30 ಕ್ಕೆ :ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಕಲಶಾಭಿಷೇಕ

ಮಧ್ಯಾಹ್ನ12-30 ಕ್ಕೆ :ಮಹಾಪೂಜೆ ,ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ

ವಿಶೇಷ ಸೂಚನೆ

ವಾರ್ಷಿಕ ಮಹೋತ್ಸವದ ಪ್ರಯುಕ್ತ ಊರ ಭಕ್ತಾದಿಗಳು ತಮ್ಮ ಈ ದೇವಸ್ಥಾನಕ್ಕೆ ದಿನಾಂಕ 08 -01 -2022 ನೇ ಶನಿವಾರ ಬೆಳಿಗ್ಗೆ 9 .00 ಗಂಟೆಗೆ ನಿಮ್ಮ ಮನೆ ಬಳಿ ಬರುವ ವಾಹನದಲ್ಲಿ ಹಸಿರು ಹೊರೆ ಕಾಣಿಕೆ ಸಮರ್ಪಿಸುವಂತೆ ವಿನಂತಿಸಲಾಗಿದೆ .
ವಾರ್ಷಿಕ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳು ಸ್ವ-ಇಚ್ಛೆಯಿಂದ ನೀಡುವ ತನು-ಮನ-ಧನ ಸಹಾಯವನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸಲಾಗುವುದು
ದೇವಸ್ಥಾನದ ಅಭಿವೃದ್ದಿಗಾಗಿ ನೀಡುವ ರೂ.1000 ಕ್ಕಿಂತ ಮೇಲ್ಪಟ್ಟ ವಾರ್ಷಿಕ ದೇಣಿಗೆ ಯನ್ನು ಈ ದಿನ ನೀಡಿ ಸಹಕರಿಸಬೇಕಾಗಿ ವಿನಂತಿ
ಭಕ್ತಾದಿಗಳು ಬರುವಾಗ ತುಳಸಿ ದಳ ,ಹೂವು ,ಹಿಂಗಾರ ಮತ್ತು ಕೇಪುಳ ಹೂವು ತರುವಂತೆ ವಿನಂತಿ.
ದಿನಾಂಕ 08 -01 -2022 ಶನಿವಾರದಂದು ಬೆಳಿಗ್ಗೆ ಗಂಟೆ 10 -00 ರಿಂದ ದೇವಸ್ಥಾನದಲ್ಲಿ ನಡೆಯುವ ಶ್ರಮದಾನಕ್ಕೆ ಊರ ಪ್ರತಿಯೊಬ್ಬರು ಕೂಡ ಸಹಕರಿಸುವಂತೆ ವಿನಂತಿ

ಆಡಳಿತ ಮಂಡಳಿ ಅಧ್ಯಕ್ಷರು /ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು

ಹಳೆಯ ಫೋಟೋಗಳು

[foogallery id=”1129″]

—-ಜಾಹೀರಾತು

Leave a Reply

error: Content is protected !!