ಕೊರೊನಾ ಪ್ರಕರಣ ಹೆಚ್ಚಳ :ಕಠಿಣ ಕ್ರಮದ ಬಗ್ಗೆ ನಾಳೆ ತಜ್ಞರ ಸಮಿತಿ ಜೊತೆ ಸಿಎಂ ಸಭೆ

ಶೇರ್ ಮಾಡಿ

ನೇಸರ ಜ.3: ಬೆಂಗಳೂರು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ನಾಳೆ ಸಂಜೆ ತಜ್ಞರ ಸಮಿತಿ ಜೊತೆ ಸಭೆ ನಡೆಯಲಿದ್ದು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್ ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊರೊನಾ ಮತ್ತು ಒಮಿಕ್ರಾನ್ ಎರಡನ್ನು ನಾವು ಗಮನಿಸುತ್ತಿದ್ದೇವೆ ಬಹಳ ವೇಗದಲ್ಲಿ ಸೋಂಕು ಹರಡುತ್ತದೆ.ಹೀಗಾಗಿ ತಜ್ಞರ ಸಮಿತಿ ಜೊತೆ ಸಭೆ ಅಗತ್ಯವಿದೆ.
ಈ ನಿಟ್ಟಿನಲ್ಲಿ ನಾಳೆ ಸಂಜೆ ತಜ್ಞರ ಸಮಿತಿ ಜೊತೆ ಚರ್ಚಿಸಿ, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ
ನನಗೆ ಈ ಹಿಂದೆ ಎರಡು ಅಲೆಗಳನ್ನು ಎದುರಿಸಿರುವ ಅನುಭವದ ಹಿನ್ನೆಲೆಯಲ್ಲಿ ಆದಷ್ಟು ನವಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಯಂತ್ರಣ ಮಾಡಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸೂಚನೆ ಕೊಡಿ ಎಂದು ತಜ್ಞರಿಗೆ ಹೇಳಿದ್ದೇನೆ. ನಾಳೆ ಅವರು ಏನು ಹೇಳುತ್ತಾರೆ ನೋಡೋಣ ಎಂದರು.
ಎರಡು ಬಾರಿ ನಮಗೆ ಕೂರೊನಾದ ಅನುಭವವಾಗಿದೆ ಜನತೆ ಈಗ ಸ್ವಯಂ ನಿಯಂತ್ರಣ ಕೊಳ್ಳಬೇಕು.ಮಾರ್ಗಸೂಚಿ ಕುರಿತ ಆದೇಶಗಳನ್ನು ಸ್ವಯಂ ಪಾಲನೆ ಮಾಡಬೇಕು.ಮಾಸ್ಕ್ ಧರಿಸುವುದು,ಅಂತರ ಕಾಯ್ದುಕೊಳ್ಳುವುದು,ಆರೋಗ್ಯದ ಸುರಕ್ಷತೆ ಬಗ್ಗೆ ಗಮನ ಕೊಡುವ ಕೆಲಸವನ್ನು ಜನತೆ ಮಾಡಬೇಕು ಎಂದು ಸಿಎಂ ತಿಳಿಸಿದರು.

ಜಾಹೀರಾತು

Leave a Reply

error: Content is protected !!