ಸುಬ್ರಹ್ಮಣ್ಯದಲ್ಲಿ ಮಕ್ಕಳ ಲಸಿಕಾಕರಣಕ್ಕೆ ಚಾಲನೆ

ಶೇರ್ ಮಾಡಿ

ನೇಸರ ಜ.3:ಇಂದು ದೇವಾಲಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಹಾಗು ಪ್ರೌಢ ಶಾಲಾ ವಿಭಾಗದ 15ರಿಂದ 18 ವರುಷ ಪ್ರಾಯದೊಳಗಿನ ವಿಧ್ಯಾರ್ಥಿಗಳಿಗೆ ಕೋವಿಡ್ 19 ಲಸಿಕಾ ಕಾರ್ಯಕ್ರಮವನ್ನು,ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಹಾಗು ಇಂಧನ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಅವರು ಜಂಟಿಯಾಗಿ ಉದ್ಘಾಟಿಸಿದರು.

ವಿಧಾನಪರಿಷತ್ ಸದಸ್ಯ ಬೋಜೇಗೌಡ,ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾವ್ ಸುಳ್ಳಿ,ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ವನಜಾ ಭಟ್, ಪ್ರಾಂಶುಪಾಲ ಸೋಮಶೇಖರ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಸುಬ್ರಹ್ಮಣ್ಯದ ಆರೋಗ್ಯಾಧಿಕಾರಿ ಡಾಕ್ಟರ್ ತ್ರಿಮೂರ್ತಿ, ವಿದ್ಯುತ್ ನಿಗಮ ಅಧ್ಯಕ್ಷ ಶರತ್, ಮೆಸ್ಕಾಂ ಮಂಡಳಿ ನಿರ್ದೇಶಕ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಜಯಶ್ರೀ.ಬಿ ದಂಬೆಕೋಡಿ ಸ್ವಾಗತಿಸಿ, ಉಪನ್ಯಾಸಕ ಮೋಹನಗೌಡ ವಂದಿಸಿದರು, ಪ್ರಜ್ವಲ್ ಕುಮಾರ್ ನಿರೂಪಿಸಿದರು.

Leave a Reply

error: Content is protected !!