ನೇಸರ ಜ.3:ಸುಬ್ರಹ್ಮಣ್ಯದಲ್ಲಿ ಭೂಗತ ಕೇಬಲ್ ಮತ್ತು 8 ಮೆಗಾ ವೋಲ್ಟಾ ಪರಿವರ್ತಕ 11 ಕೆ ವಿ ಫೀಡರ್ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಇಂಧನ ಸಚಿವ ಸುನಿಲ್ ಕುಮಾರ್ ಜ.3 ರಂದು ಉದ್ಘಾಟನೆ ಮಾಡಿದರು.
ಆರಂಭದಲ್ಲಿ ಸಬ್ ಸ್ಟೇಶನ್ ಗೆ ತೆರಳಿ ಅಲ್ಲಿ ಕೇಬಲ್,ಪರಿವರ್ತಕ,ಫೀಡರ್ ಗಳನ್ನು ಉದ್ಘಾಟಿಸಲಾಯಿತು.
ಬಳಿಕ ವಲ್ಲೀಶ ಸಭಾಭವನದಲ್ಲಿ ಸಭಾಕಾರ್ಯಕ್ರಮದಲ್ಲಿ ದೀಪಬೆಳಗಿಸಿ ಬಳಿಕ ಮಾತನಾಡಿದ ಅವರು ಸುಬ್ರಹ್ಮಣ್ಯ ಪೇಟೆಯಲ್ಲಿ ಯು ಜಿ ಕೇಬಲ್ ಅಳವಡಿಕೆಗೆ ಬದ್ದನಿದ್ದೇನೆ ಎಂದರು.ಹಲವಾರು ಅಡೆತಡೆಗಳ ನಡುವೆ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ.ಸುಮಾರು ಹನ್ನೊಂದು ಕಿಲೋಮೀಟರ್ ಉದ್ದಕ್ಕೆ ಭೂಗತ ಕೇಬಲ್ ಅಳವಡಿಕೆ ಮಾಡುತಿರುವುದು ಇದು ರಾಜ್ಯದಲ್ಲಿಯೇ ಮೊದಲ ಮಾರ್ಗ.ಸಚಿವನಾಗಿ ಹಲವು ರೈತಪರ ಯೋಜನೆಗಳನ್ನು ಕೈಗೊಂಡಿದ್ದೇನೆ.ಮೆಸ್ಕಾಂ ನಲ್ಲಿ ಅನೇಕ ಬದಲಾವಣೆಯಾಗಿದೆ,ಬೆಳಕು ಯೋಜನೆಯಡಿ ಪ್ರತಿ ಮನೆಗೆ ವಿದ್ಯುತ್ ನೀಡಲಿದ್ದೇವೆ.ಕೆಟ್ಟುಹೋದ ಪರಿವರ್ತಕವನ್ನು 24 ಗಂಟೆಗಳ ಒಳಗೆ ಬದಲಾಯಿಸುವ ಈ ಯೋಜನೆ ಜಾರಿಯಲ್ಲಿದ್ದು.20 ಸಾವಿರ ಪರಿವರ್ತಕ ಬದಲಿಸಿದ್ದೇವೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ವಹಿಸಿದ್ದರು.ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಬೋಜೇಗೌಡ,ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಸಂತೋಷ ರೈ ಬೋಲಿಯಾರ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ,ಮೆಸ್ಕಾಂ ನಿರ್ದೇಶಕ ಕಿಶೋರ್.ಬಿ.ಆರ್,ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ,ತಾಂತ್ರಿಕ ನಿರ್ದೇಶಕರಾದ ಡಿ.ಪದ್ಮಾವತಿ,ಮುಖ್ಯ ಆರ್ಥಿಕ ಅಧಿಕಾರಿ ಬಿ.ವಿ.ಗಂಗಾಧರ್,ಮುಖ್ಯ ಇಂಜಿನಿಯರ್ ಪುಷ್ಪಾ,ಅಧೀಕ್ಷಕ ಇಂಜಿನಿಯರ್ ಮಂಜಪ್ಪ,ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ಉಪಸ್ಥಿತರಿದ್ದರು.
ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು