ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) 2023 ಅನ್ನು ಮೇ 17 ರಂದು ನಡೆಸಲು ನಿರ್ಧರಿಸಲಾಗಿದೆ.
ಪದವಿ ಪೂರ್ವ ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್ಗಳಿಗಾಗಿ ನೀಟ್ ಯುಜಿ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗುತ್ತದೆ. ದೇಶದಲ್ಲಿರು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಏಜನ್ಸಿಯೂ ಈ ಪರೀಕ್ಷೆಯನ್ನು ಏಕಕಾಲಕ್ಕೆ ದೇಶಾದ್ಯಂತ ನಡೆಸುತ್ತದೆ.
ಈ ಬಾರಿಯ ನೀಟ್ ಯುಜಿ ಪ್ರವೇಶ ಪರೀಕ್ಷೆಯನ್ನು ಮೇ 7ರಂದು ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಎನ್ಟಿಎ ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://neet.nta.nic.in/ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.
ದೇಶಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ ಯುಜಿ 2023 ಪರೀಕ್ಷೆಯನ್ನು ನಡೆಸಲು ಈಗಾಗಲೇ ದಿನಾಂಕವನ್ನು ನಿಗದಿಪಡಿಸಲಾಗಿದೆ. ಮೇ 7, 2023 ಭಾನುವಾರದಂದು ಮಧ್ಯಾಹ್ನ 2 ರಿಂದ ಸಂಜೆ 5.20ರವರೆಗೆ ಈ ಪ್ರವೇಶ ಪರೀಕ್ಷೆಯನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಸಲಾಗುತ್ತದೆ.
ಈ ಬಾರಿ ನೀಟ್ ಯುಜಿ 2023 ಪ್ರವೇಶ ಪರೀಕ್ಷೆಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ನೀಟ್ ಪರೀಕ್ಷೆಯನ್ನು ಭಾರತದ 499 ನಗರಗಳಲ್ಲಿ ಮತ್ತು ಭಾರದ ಹೊರಗಿನ 14 ನಗರಗಳಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ತಮಿಳು, ತೆಲಗು ಮತ್ತು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಒಂದು ವೇಳೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗದ ಅಭ್ಯರ್ಥಿಗಳು ಹಾಗೂ ಪ್ರವೇಶ ಪತ್ರದಲ್ಲಿ ಏನಾದರು ತೊಂದರೆಗಳು ಇದ್ದರೆ ಅಭ್ಯರ್ಥಿಗಳು ಇ-ಮೇಲ್ ವಿಳಾಸ [email protected] ಗೆ ಮೇಲ್ ಮಾಡಬಹುದು. ಅಥವಾ ದೂರವಾಣಿ ಸಂಖ್ಯೆ 011-40759000 ಗೆ ಸಂಪರ್ಕಿಸಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆ ಮಾದರಿ
ನೀಟ್ ಯುಜಿ 2023 ಪ್ರವೇಶ ಪರೀಕ್ಷೆ ಬರೆಯುವಾಗ ಅಭ್ಯರ್ಥಿಗಳು ಸರಿಯಾದ ಉತ್ತರಗಳನ್ನು ಬರೆದರೆ ಒಳ್ಳೆಯದು. ಏಕೆಂದರೆ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ನೀಟ್ ಪರೀಕ್ಷೆಯ ಮಾದರಿಯ ಪ್ರಕಾರ, ವೈದಕೀಯ ಪ್ರವೇಶ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿಷಯಗಳ ಮೇಲೆ 180 ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗುತ್ತದೆ. ಪ್ರತಿ ವಿಷಯಕ್ಕೆ ಒಟ್ಟು 45 ಪ್ರಶ್ನೆಗಳಿದ್ದು, ಗರಿಷ್ಠ ಅಂಕಗಳು 720 ಆಗಿರುತ್ತದೆ.
ನೀಟ್ ಯುಜಿ ಪ್ರವೇಶ ಪರೀಕ್ಷೆಯಲ್ಲಿ ಪ್ರತಿ ಸರಿಯಾದ ಉತ್ತರಕ್ಕೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ಒಂದು ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪ್ರಶ್ನೆಗಳಿಗೆ ಉತ್ತರಿಸದೆ ಹಾಗೇ ಬಿಟ್ಟ ಪ್ರಶ್ನೆಗಳಿಗೆ ಯಾವುದೇ ನಕಾರಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುವುದಿಲ್ಲ.
ಅಭ್ಯರ್ಥಿಗಳಿಗೆ ಸೂಚನೆಗಳು
ನೀಟ್ 2023 ಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದ ಜತೆಗೆ ಮಾನ್ಯವಾದ ಐಡಿ ಪುರಾವೆ (ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ)ಯನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.
- ಪ್ರವೇಶ ಪತ್ರವನ್ನು ತರದ ಅಭ್ಯರ್ಥಿಗಳನ್ನು ಪರೀಕ್ಷಾ ಹಾಲ್ಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.
- ವಿದ್ಯಾರ್ಥಿಗಳು ತಮ್ಮ ಪ್ರವೇಶ ಕಾರ್ಡ್ನಲ್ಲಿ ನಮೂದಿಸಲಾದ ವರದಿ ಮಾಡುವ ಸಮಯಕ್ಕೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ತೆರಳಿ.
- ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕಾಗುತ್ತದೆ. ಉದ್ದನೆಯ ತೋಳುಗಳು, ಬೂಟುಗಳು, ಆಭರಣಗಳು ಅಥವಾ ಲೋಹೀಯ ವಸ್ತುಗಳನ್ನು ಹೊಂದಿರುವ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ.
- ಕಡಿಮೆ ಹೀಲ್ಸ್ ಚಪ್ಪಲಿಗಳು ಮತ್ತು ಸ್ಯಾಂಡಲ್ಗಳನ್ನು ಮಾತ್ರ ಅನುಮತಿಸಲಾಗಿದೆ.
- ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಪಠ್ಯ ಸಾಮಗ್ರಿಗಳು, ಕಾಗದದ ಬಿಟ್ಗಳು, ಜ್ಯಾಮಿಟ್ರೀ/ಪೆನ್ಸಿಲ್ ಬಾಕ್ಸ್ಗಳು, ಪ್ಲಾಸ್ಟಿಕ್ ಪೌಚ್ಗಳು, ಕ್ಯಾಲ್ಕುಲೇಟರ್ಗಳು, ಮಾಪಕಗಳು, ರೈಟಿಂಗ್ ಪ್ಯಾಡ್ಗಳು, ಪೆನ್ ಡ್ರೈವ್ಗಳು, ಎರೇಸರ್ಗಳು, ಕ್ಯಾಲ್ಕುಲೇಟರ್ಗಳು, ಲಾಗ್ ಟೇಬಲ್ಗಳು, ಎಲೆಕ್ಟ್ರಾನಿಕ್ ಪೆನ್ಗಳು ಇತ್ಯಾದಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ.