ನಾವೂರು ಧರೆಗೆ ಗುದ್ದಿದ ಖಾಸಗಿ ಬಸ್; ಮಹಿಳೆ ಮೃತ್ಯು

ಶೇರ್ ಮಾಡಿ

ಬೆಳ್ತಂಗಡಿಯಿಂದ ಕಿಲ್ಲೂರು ಕಡೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಾವೂರು ಸಮೀಪದ ಪಡಂಬಿಲ- ಕಾಪಿನಡ್ಕ ಎಂಬಲ್ಲಿ ರಸ್ತೆ ಬದಿಯ ಧರೆಗೆ ಗುದ್ದಿದ ಪರಿಣಾಮ ಪ್ರಯಾಣಿಕ ಮಹಿಳೆ ಇಂದಬೆಟ್ಟು ಗ್ರಾಮದ ಸುಂದರಿ(60) ಎಂಬವರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಬಸ್ ನಲ್ಲಿದ್ದ ಇತರ 5 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು

Leave a Reply

Your email address will not be published. Required fields are marked *

error: Content is protected !!