ಇಚ್ಲಂಪಾಡಿ:ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ ಮೇ 1ರಿಂದ 7ರವರೆಗೆ ನಡೆಯಿತು.
ಪ್ರತಿ ವರ್ಷ ನೀಡುತ್ತಾ ಬರುತ್ತಿರುವ “ಜೋರ್ಜಿಯನ್ ಎಕ್ಸಲೆಂಟ್ ಅವಾರ್ಡ್-2023” ನ್ನು ನರ್ಸಿಂಗ್ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ರಾಷ್ಟ್ರಮಟ್ಟದಲ್ಲಿ ಇಂಡಿಯನ್ ನರ್ಸಿಂಗ್ ಕೌನ್ಸಿಲಿಂಗ್ ನೀಡುವ ಪ್ರತಿಷ್ಠಿತ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ ಯನ್ನು ಪಡೆದಿರುವ ಶ್ರೀಮತಿ ಮರಿಯಮ್ಮ.ಎಂ.ಪಿ ಯವರಿಗೆ ಪ್ರಶಸ್ತಿಯನ್ನು ಇಡುಕ್ಕಿ ಭದ್ರಾಸನ ಮೆತ್ರಾಪೋಲಿತ್ತಾ ಅತೀ ವಂದನೀಯ ಸಖರಿಯಾ ಮಾರ್ ಸೇವೇರಿಯೋಸ್ ಮೆತ್ರಾಪ್ಪೋಲಿತ್ತಾರವರ ನೇತೃತ್ವದಲ್ಲಿ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್ ಹಾಗೂ ವಿವಿಧ ಚರ್ಚ್ ನ ಧರ್ಮಗುರುಗಳ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚ್‌ನ ಆಡಳಿತ ಸಮಿತಿ ಕಾರ್ಯದರ್ಶಿ ವಿ.ಎನ್.ಚಾಕೋ, ಟ್ರಸ್ಟಿ ಜೋನ್ ಅಬ್ರಹಾಂ ಚೀರಮಟ್ಟಂ, ಸದಸ್ಯರುಗಳಾದ ಜೋನ್ ಜೋಸೆಫ್, ಟಿ.ಕೆ.ಕುರಿಯಾಕೋಸ್, ಪಿ.ಸಿ.ಪೌಲೋಸ್, ಅಬ್ರಹಾಂ ಟಿ.ಯಂ., ಸಿ.ಕೆ.ಜಾನ್ಸನ್, ಪಿ.ಜಿ.ರೋಯಿ, ಮೇಹಿ ಜಾರ್ಜ್, ಪಿ.ಟಿ.ತೋಮಸ್, ಶಾಲಿನಿ ಪೌಲೋಸ್, ಲೆಕ್ಕ ಪರಿಶೋಧಕರಾದ ಉಲಹನ್ನನ್ ಪಿ.ಯಂ., ಸಿ.ಕೆ.ತೋಮಸ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.