ನೆಲ್ಯಾಡಿ-ಕೊಣಾಲು:ಸೈಂಟ್ ತೋಮಸ್ ಯಾಕೋಬಾಯ ದೇವಾಲಯದಲ್ಲಿ ಮೊರ್ ತೋಮಸ್ ಒರ್ಮ ಪೆರುನ್ನಾಳ್ ಹಬ್ಬ ಮತ್ತು ನೂತನ ಸಭಾಭವನ ಲೋಕಾರ್ಪಣೆ

ಶೇರ್ ಮಾಡಿ

ನೇಸರ ನ.4: ನೆಲ್ಯಾಡಿ-ಕೊಣಾಲು ಸೈಂಟ್ ತೋಮಸ್ ಯಾಕೋಬಾಯ ದೇವಾಲಯದಲ್ಲಿ ಮೊರ್ ತೋಮಸ್ ಒರ್ಮ ಪೆರುನ್ನಾಳ್ ಹಬ್ಬ ಜ.2 ಮತ್ತು 3ರಂದು ನಡೆಯಿತು.

ವಂದನೀಯ ಬಿಷಪ್ ಮೋರ್ ಕ್ರಿಸೆಷ್ಟೊಮೋಸ್ ಮಾರ್ಕೊಸ್ ಮೆತ್ರಾಪೋಲಿ ಇವರ ಮಾರ್ಗದರ್ಶನದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಮತ್ತು ಪುರೋಹಿತರು ನೇತೃತ್ವ ವಹಿಸಿದ್ದರು. ದಿನಾಂಕ 2/1/2022ನೇ ಭಾನುವಾರದಂದು ನೂತನ ಸಭಾಭವನ ಮೊರ್ ಪೋಲಿ ಕಾರ್ಪಸ್ ಮೆಮೋರಿಯಲ್ ಹಾಲ್ ನ್ನು ಪ್ರಾರ್ಥನಾ ಪೂಜೆಯೊಂದಿಗೆ ಲೋಕಾರ್ಪಣೆಗೊಳಿಸಿದರು. ನಂತರ ದಿವ್ಯ ಪೂಜೆ ಪ್ರಾರ್ಥನಾದಿಗಳು ದೇವಾಲಯದಲ್ಲಿ ನಡೆಯಿತು.

ನಂತರ ನಡೆದ ಕಾರ್ಯಕ್ರಮದಲ್ಲಿ ಕೋರೋಪ್ಸಿಕೋಪ ವೇ|ರೆ|ಪಿ.ಕೆ.ಅಬ್ರಹಾಂ ಮತ್ತು ನೂತನ ಸಭಾಭವನದ ಉಸ್ತುವಾರಿವಹಿಸಿದ್ದ ರೇ|ಪಾ| ಬಿನು ಜೋಸೆಪ್ (ವಿಕಾರ್ ಸೈಂಟ್ ಥೋಮಸ್ ಚರ್ಚ್ ಕೊಣಾಲು,ಕಾರ್ಯದರ್ಶಿ ಈ.ಜಿ.ಪೌಲೋಸ್, ಖಜಾಂಚಿ ಮಧು.ಎ.ಜೆ ಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ವಂದನೀಯ ಬಿಷಪರು ಸನ್ಮಾನಿಸಿದರು.
ಕಟ್ಟಡ ಕಾಮಗಾರಿಗಾಗಿ ದುಡಿದ ಕಾಂಟ್ರಾಕ್ಟರ್ ಸೈಜು,ಇಂಜಿನಿಯರ್ ಶಾಹಿದ್, ಕಾಂಟ್ರಾಕ್ಟರ್ ರಹಿಮಾನ್, ಪೇಂಟರ್ ಮುಸ್ತಾಪ, ಫಾಬ್ರಿಕ್ ವರ್ಕ್ ವಿನೋದ್, ಎಲೆಕ್ಟ್ರಿಷಿಯನ್ ಸುನಿಲ್,ಅಭಿಜಿತ್,ರೂಫ್ ವರ್ಕ್ ಮಾಡಿದ ಪ್ರದೀಪ್,ಸಿಬು ಮತ್ತು ಬಿನು ಎಯುಪುಳ್ಳಿ ಯವರನ್ನು ನೆನಪಿನ ಕಾಣಿಕೆ ನೀಡಲಾಯಿತು.ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ದಿನಾಂಕ 3/1/2022 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಲೋಕದ ಸಮಸ್ತರಿಗೂ ಒಳ್ಳೆದಾಗಲಿ ಎನ್ನುವ ಸಾಮೂಹಿಕ ಪ್ರಾರ್ಥನೆ ನಡೆದು ಭೋಜನಕೂಟ ದೊಂದಿಗೆ ಸಮಾಪನಗೊಂಡಿತು.ದೇವಾಲಯದ ಭಕ್ತರು ನೀಡಿದ ಹೊರೆ ಕಾಣಿಕೆ ಚರ್ಚಿನ ವತಿಯಿಂದ ಏಲಂ ಮಾಡಲಾಯಿತು
.

Leave a Reply

error: Content is protected !!