ಕಡಬ:ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲದಲ್ಲಿ -“ಸದ್ಭಾವನಾ ಸಮಾವೇಶ”

ಶೇರ್ ಮಾಡಿ

ನೇಸರ ನ.4: ಕಡಬ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲದಲ್ಲಿ ದಿನಾಂಕ 4-1- 2022 ನೇ ಮಂಗಳವಾರ ಸದ್ಭಾವನಾ ಸಮಾವೇಶ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಸಂಚಾಲಕರಾದ ರೆ.ಪಾ.ಸಖರಿಯಾಸ್ OIC ಯವರ ನೇತೃತ್ವದಲ್ಲಿ ಪ್ರತಿವರ್ಷದಂತೆ ಸಂಸ್ಥೆಯಲ್ಲಿ ಕ್ರಿಸ್ ಮಸ್ ಹಾಗೂ ಹೊಸವರ್ಷಾಚರಣೆ ಪ್ರಯುಕ್ತ ಸರ್ವ ಧರ್ಮಗಳನ್ನು ಒಳಗೊಂಡ ಸದ್ಭಾವನಾ ಸಮಾವೇಶವನ್ನು ಆಯೋಜಿಸಲಾಯಿತು.
ದೀಪ ಪ್ರಜ್ವಲಿಸುವ ಮೂಲಕ ರೆಂಜಿಲಾಡಿ ಬೀಡು ಅರಸರಾದ ತಮ್ಮಯ್ಯ ಯಾನೆ ಯಶೋಧರ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಈ ವಿದ್ಯಾಸಂಸ್ಥೆ ನಮ್ಮ ಊರನ್ನು ಬೆಳಗಿಸಿದ ಸಂಸ್ಥೆ.ಶಾಲೆಗಳಲ್ಲಿ ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ,ವಿದ್ಯಾರ್ಥಿಗಳು ಸಾಮರಸ್ಯದ ಸದ್ಭಾವನೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೆ.ಫಾ.ಸತ್ಯನ್ ತೋಮಸ್ OIC ಸಂಚಾಲಕರು,ಬೆಥನಿ ವಿದ್ಯಾಸಂಸ್ಥೆಗಳು ನೆಲ್ಯಾಡಿರವರು ಎಲ್ಲಾ ಧರ್ಮದ ಮೂಲತತ್ವ ಪ್ರೀತಿ,ಸ್ನೇಹ,ಸಹಬಾಳ್ವೆ.ಧರ್ಮದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡರೆ ಎಲ್ಲರೂ ಸದ್ಭಾವನೆಯಿಂದ ಇರಲು ಸಾಧ್ಯವೆಂದರು.

ಮುಖ್ಯ ಅತಿಥಿಗಳಾದ ರೆ.ಪಾ.ಜೋನ್ ಮ್ಯಾಥ್ಯು ವಿಕಾರ್,ಸೈಂಟ್ ಮೇರೀಸ್ ಚರ್ಚ್ ಮರ್ದಾಳ ರವರು ಮಾತನಾಡುತ್ತಾ ಎಲ್ಲರೂ ಒಟ್ಟಾಗಿ ಬಾಳುವ ಮನೋಭಾವ ಬೇಕು,ವಿದ್ಯಾರ್ಥಿಗಳಾದ ನಮ್ಮ ಮನಸ್ಸಿನಲ್ಲಿ ಸದ್ಭಾವನೆ ಮೂಡಿಬರಬೇಕು ಇದರಿಂದ ಈ ಕಾರ್ಯಕ್ರಮ ಅರ್ಥಪೂರ್ಣವಾಗಲು ಸಾಧ್ಯ ಎಂದು ನುಡಿದರು.
ಇನ್ನೋರ್ವ ಮುಖ್ಯಅತಿಥಿ ಉಮೇಶ್ ಶೆಟ್ಟಿ ಸಾಯಿರಾಂ,ಸಂಚಾಲಕರು ತೆಗೆರ್ ತುಳು ಕೂಟ,ನೂಜಿಬಾಳ್ತಿಲ ಮತ್ತು ಇರ್ಷಾದ್ ಕೆ.ಜಿ ಮ್ಯಾನೇಜರ್,ಬದ್ರಿಯಾ ಶಿಕ್ಷಣ ಸಂಸ್ಥೆ ನೆಲ್ಯಾಡಿ ಇವರುಗಳು ಸಂದರ್ಭೋಚಿತವಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ, ಕಡಬ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್ ಪಿ.ಕೆ, ನಿವೃತ್ತ ಮುಖ್ಯಗುರು ಬಾಲಕೃಷ್ಣ, ಚೇರಿಯನ್, ಜಾನ್ ಕುಟ್ಟಿ,, ಗ್ರಾಮ ಪಂಚಾಯತ್ ಸದಸ್ಯರು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ಉಪ ನ್ಯಾಸಕರು,ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು,ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಸದಾನಂದಗೌಡ ಸಾಂತ್ಯಡ್ಕ ಪಿ.ಟಿ.ಎ ಅಧ್ಯಕ್ಷರು ಧನ್ಯವಾದ ಸಮರ್ಪಿಸಿದರು, ನಿರೂಪಣೆ ಪ್ರದೀಪ್ ಕುಮಾರ್ ನೆರವೇರಿಸಿದರು.

ಜಾಹೀರಾತು

Leave a Reply

error: Content is protected !!