ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಕೋಶ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ಸ್ ರೆಂಜರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ದಿನಾಚರಣೆಯ ಅಂಗವಾಗಿ ಜೂ.04 ರಂದು ವೆಂಕಟಾಪುರ, ನಡುಗಲ್ಲು, ಪುಳಿಗದ್ದೆ ಅರಣ್ಯ ಪ್ರದೇಶಗಳಲ್ಲಿ ಬೀಜೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕಗಳ 200 ವಿದ್ಯಾರ್ಥಿಗಳು ಭಾಗವಹಿಸಿದರು. ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳಾಗಿರುವ ರಾಘವೇಂದ್ರ ಎಚ್ ಪಿ, ಉಪವಲಯ ಅರಣ್ಯ ಅಧಿಕಾರಿಗಳಾಗಿರುವ ಮನೋಜ್, ವೃಂದ, ಅಪೂರ್ವ, ಸದಾಶಿವ, ಅರಣ್ಯ ಸಿಬ್ಬಂದಿಗಳಾಗಿರುವ ಬಸಪ್ಪ, ರಾಮಚಂದ್ರ, ಮಾಲ್ತೇಶ್, ಅಶೋಕ್, ಧನಂಜಯ ಮಾರ್ಗದರ್ಶನವನ್ನು ನೀಡಿ ಸಹಕರಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳಾಗಿರುವ ಶ್ರೀಮತಿ ಆರತಿ ಕೆ, ಶ್ರೀಮತಿ ನಮಿತಾ, ಶ್ರೀಕುಮಾರ್ ಶೇಣಿ ಹಾಗೂ ರೋವರ್ಸ್ ಡೇಂಜರ್ಸ್ ಲೀಡರ್ಸ್ ಆಗಿರುವ ಶ್ರೀಮತಿ ಪ್ರಮೀಳಾ, ಶ್ರೀಮತಿ ಅಶ್ವಿನಿ, ಯೂತ್ ರೆಡ್ ಕ್ರಾಸ್ ಸಂಯೋಜಕರಾದ ಸೃಜನ್ ಮುಂಡೂಡಿ ಸಹಕರಿಸಿದರು.