ನೇಸರ ಜ.8: ಕೊರೊನಾ ಸೋಂಕು ಪ್ರಸರಣ ಅಂತಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 10 ರಿಂದ ಆರಂಭವಾಗಿದೆ ಸೋಮವಾರ ಬೆಳಗ್ಗೆ 5 ತನಕ ಜಾರಿಯಲ್ಲಿದೆ.ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಶುಕ್ರವಾರ ರಾತ್ರಿ 8ರ ಬಳಿಕ ಜನಸಂದಣಿ ಕಡಿಮೆಯಾಗತೊಡಗಿತು.ಹತ್ತು ಗಂಟೆಯ ಬಳಿಕ ಜನಜೀವನ ಸಂಚಾರ ಬಹುತೇಕ ಸ್ತಬ್ಧಗೊಂಡಿತ್ತು.ಇದರ ಮಧ್ಯೆಯೂ ಕಾರು ದ್ವಿಚಕ್ರ ವಾಹನಗಳಲ್ಲಿ ಬಂದ ಕೆಲವರನ್ನು ಪೊಲೀಸರು ಪ್ರಶ್ನಿಸುತ್ತಿದ್ದದು ಕಂಡುಬಂದಿದೆ.ಹಲವೆಡೆ ಬ್ಯಾರಿಕೇಡ್ ಗಳನ್ನು ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಅನುಮತಿ
ಸೋಮವಾರ ಬೆಳಿಗ್ಗೆ ಐದರವರೆಗೆ ಜಿಲ್ಲೆಗಳಲ್ಲಿ ತುರ್ತುಸೇವೆ, ದಿನಸಿ ಆಹಾರ ವಸ್ತುಗಳ ಮಾರಾಟ, ಹೋಟೆಲ್ ಳಲ್ಲಿ ಪಾರ್ಸೆಲ್ ಮತ್ತು ಅಗತ್ಯ ಸೇವೆಗಳು ಹೊರತುಪಡಿಸಿ ಬೇರೆ ಯಾವುದೇ ಸೇವೆಗಳು ಇರುವುದಿಲ್ಲ.ತುರ್ತು ಸೇವೆ ಒದಗಿಸುವ ಸರಕಾರಿ,ಅರೆ ಸರಕಾರಿ,ನಿಗಮ-ಮಂಡಳಿಗಳ ಕಚೇರಿಗಳು ಕಾರ್ಯನಿರ್ವಹಿಸಲಿದೆ ಶೇ 50ರಷ್ಟು ಸಿಬ್ಬಂದಿ ಕಚೇರಿಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ.
ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಪರೀಕ್ಷೆ ನಡೆಸಲು ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಮುಖ್ಯರಸ್ತೆಗಳ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.ಜಿಲ್ಲೆಯಲ್ಲಿ ಕೋರೋಣ ಪರೀಕ್ಷೆ ಪ್ರಮಾಣವನ್ನು ಏರಿಸಲಾಗಿದೆ.ಹೊರರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.