ಬೆಂಗಳೂರು: ಹೆಂಡತಿಯನ್ನು ಮನೆಗೆ ಕಳುಹಿಸದಿದ್ದಕ್ಕೆ ಆಕ್ರೋಶಗೊಂಡ ಗಂಡ ಆಕೆಯ ಮನೆಗೆ ಹೋಗಿ ಅತ್ತೆಗೆ ಚಾಕುವಿನಿಂದ ಚುಚ್ಚಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಕೃತ್ಯವೆಸಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಕೋಲಾರದ ವೇಮಗಲ್ ಮೂಲದ ಮನೋಜ್ ಬಂಧಿತ ಆರೋಪಿ ಗೀತಾ ಹಲ್ಲೆಗೊಳಗಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಮೂಲದ ವರ್ಷಿತಾ ಎಂಬುವರನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು ಬೆಳ್ಳಂದೂರು ಸಮೀಪ ಬಾಡಿಗೆ ಮನೆ ಮಾಡಿಕೊಂಡಿದ್ದರು ಆರಂಭದಲ್ಲಿ ಇಬ್ಬರು ಕೂಡ ದುಡಿದು ಜೀವನ ಮಾಡುತ್ತಿದ್ದರು ಅದ್ಯಾಕೋ ಕಾಲಕ್ರಮೇಣ ಕುಡಿತಕ್ಕೆ ಮನೋಜ್ ಅಂಟಿಕೊಂಡಿದ್ದ ಇನ್ನು ವರ್ಷಿತಾ ಎಷ್ಟೇ ಬುದ್ಧಿ ಹೇಳಿದ್ದರೂ ಕ್ಯಾರೇ ಎನ್ನದೇ ಆಕೆಯ ಮೇಲೆ ಅನುಮಾನ ಪಡೋದು ದೈಹಿಕವಾಗಿ ಹಿಂಸೆಕೋಡೊದನ್ನ ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಊರಿಗೆ ಹೋಗಿದ್ದ ವರ್ಷಿತಾಗೆ ಮನೆಯ ಹಿರಿಯರು ಬುದ್ಧಿ ಹೇಳಿ ವಾಪಸ್ ಕಳುಹಿಸಿದ್ರು ಆದ್ರೂ ಮನೋಜ್ ಮಾತ್ರ ಮತ್ತೆ ಕಾಟ ಕೊಡೋದನ್ನ ಮುಂದುವರಿಸಿದ ಇದರಿಂದ ಬೇಸತ್ತ ವರ್ಷಿತಾ ತವರು ಮನೆ ಸೇರಿದ್ದರು ಆರು ತಿಂಗಳು ಕಳೆದರೂ ಬಂದಿರಲಿಲ್ಲ ಕರೆ ಮಾಡಿದರೆ ಅತ್ತೆ ಗೀತಾ ಅವಳು ನಿನ್ನ ಜತೆ ಬರೋದಿಲ್ಲ ಕಾಲ್ ಮಾಡೋದು ಮೆಸೇಜ್ ಮಾಡೋದು ಬಿಟ್ಟು ಬಿಡು ಅಂತ ಹೇಳಿದ್ದರಂತೆ.
ಅಳಿಯ ಮಗಳಿಗೆ ಬುದ್ಧಿ ಹೇಳಿ ಕಳಿಸಬೇಕಾದ ಅಮ್ಮನೇ ಕುಮ್ಮಕ್ಕು ಕೊಡ್ತಿದ್ದಾಳೆ ಎಂದು ರೊಚ್ಚಿಗೆದ್ದ ಅಳಿಯ ಮನೋಜ್ ಜೂನ್ 8ರಂದು ವರ್ಷಿತಾ ಸಂಬಂಧಿಕರಿಗೆ ಹುಷಾರಿಲ್ಲ ಅಂತ ಮಂಡ್ಯಕ್ಕೆ ಹೋಗಿದ್ದಾಗ ಅಂದು ಮನೆಗೆ ಬಂದ ಮನೋಜ್ ಅತ್ತೆ ಗೀತಾಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ.
ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಗೀತಾರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ವಿಷಯ ತಿಳಿದು ಆಸ್ಪತ್ರೆಗೆ ಬಂದ ಮಗಳು ಗಂಡನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗೀತಾ ನಾನು ನಿದ್ದೆ ಮಾಡುತ್ತಿರುವಾಗ ಅಳಿಯ ಬಂದು ಬಾಗಿಲು ಬೆಲ್ ಮಾಡಿದ ನಂತರ ನಾನು ನಿದ್ದೆಯಿಂದ ಎದ್ದು ಬಾಗಿಲು ತೆಗೆದೆ ತೆಗೆದ ತಕ್ಷಣ ಮಗಳನ್ನು ಕೇಳಿದ ನಾನು ಇಲ್ಲ ಎಂದು ಹೇಳಿದೆ ನನ್ನ ತಮ್ಮನಿಗೆ ಆಕ್ಸಿಡೆಂಟ್ ಆಗಿದೆ ಎಂದು ಹೇಳಿದ ಅದಕ್ಕೆ ನಾನು ಏನು ಮಾಡಬೇಕು ಎಂದೆ ಆಚೆಗೆ ಹೋಗು ಇಲ್ಲಿ ನಿಂತುಕೊಳ್ಳಬೇಡ ಎಂದೆ ಇಲ್ಲಿ ಹೊಸ್ತಿಲ ಮೇಲೆ ನಿಂತುಕೊಳ್ಳಬೇಡ ಎಂದೆ ಹೋಗಲ್ಲ ಅಂದ ನನ್ನನ್ನೇ ಒಳಗೆ ತಳ್ಳಿದ ಚಾಕು ಎತ್ತಿಕೊಂಡು ಚುಚ್ಚಿದ ಎಂದರು.
ಈ ಸಂಬಂಧ ಆರೋಪಿಯನ್ನ ಅರೆಸ್ಟ್ ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.