ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರ ದಲ್ಲಿ ಜೂ.16 ರಂದು ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.
ನೂತನ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸು ಸಮರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದಶೇಖರ ಗೌಡ ಅನಿಲ ಇವರು ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿದು ಅದನ್ನು ಮುಂದುವರಿಸುವಂತಹ ಕೆಲಸವನ್ನು ಶ್ರೀರಾಮ ವಿದ್ಯಾಲಯ ಮಾಡುತ್ತಿದೆ ಇಂತಹ ವಿದ್ಯಾಲಯದ ಉನ್ನತಿಗೆ ಸಮಾಜದ ಜನರು ಸಹಕರಿಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಗಳಾದ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಶ್ರೀಶ ಭಟ್ ಇವರು ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗದಲ್ಲಿ ಸಾಕಷ್ಟು ಅವಕಾಶವಿದೆ ಈ ಅವಕಾಶವನ್ನು ಈ ವಿದ್ಯಾಲಯದ ವಿದ್ಯಾರ್ಥಿಗಳು ಪಡೆಯಬೇಕು. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ಗಣಿತದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು. ಮಾದಕ ವ್ಯಸನಗಳಿಗೆ ಒಳಗಾಗಬಾರದೆಂದು ವಿದ್ಯಾರ್ಥಿ ಮತ್ತು ಪೋಷಕರಿಗೆ ಕಿವಿ ಮಾತನ್ನು ಹೇಳಿದರು.
ಇನ್ನೋರ್ವ ಅತಿಥಿಗಳಾದ ಗಣೇಶ ಐತಾಳ್ ನಿವೃತ್ತ ಅಧ್ಯಾಪಕರು ಕೊಕ್ಕಡ ಇವರು ಸಂಸ್ಕಾರ ಪಡೆದಂತಹ ವ್ಯಕ್ತಿಯು ದಾರಿ ತಪ್ಪಲಾರ ಅಂತಹ ಸಂಸ್ಕಾರವನ್ನು ಕಲಿಸುವಂತಹ ಕೆಲಸವನ್ನು ಈ ವಿದ್ಯಾಲಯ ಮಾಡುತ್ತಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಯನ್ನು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಡಾ.ಶ್ರೀಶ ಭಟ್ ಇವರು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಮುರಳೀಧರ ಇವರು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮೂಲಚಂದ್ರ ಕಾಂಚನ ಹಾಗೂ ಮುಖ್ಯ ಗುರುಗಳಾದ ಗಣೇಶ ವಾಗ್ಲೆ ಇವರು ಉಪಸ್ಥಿತರಿದ್ದರು.
ಮೂಲಚಂದ್ರ ಕಾಂಚನ ಸ್ವಾಗತಿಸಿ, ಗಣೇಶ್ ವಾಗ್ಲೆ ಧನ್ಯವಾದವಿತ್ತರು, ಶ್ರೀಮತಿ ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.