ಕೇವಲ ಮೂರು ಗಂಟೆಯೊಳಗೆ ಹೊರ ರಾಜ್ಯಗಳ ನಾಲ್ವರು ಮನೆಗಳ್ಳರನ್ನು ಬಂಧಿಸಿದ ಪೊಲೀಸರು

ಶೇರ್ ಮಾಡಿ

ಮಂಗಳೂರು: ನಗರದಲ್ಲಿ ಮನೆಗಳ್ಳತನ ಘಟನೆ ವರದಿಯಾದ ಕೇವಲ ಮೂರು ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ಕದ್ದ ಮಾಲು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ಬ್ರಿಜೇಶ್ ಅಪಾರ್ಟ್‌ಮೆಂಟ್ ಕಟ್ಟಡದ 2 ಅಪಾರ್ಟ್‌ಮೆಂಟ್‌ಗಳಲ್ಲಿ ಜೂ.15ರ ಗುರುವಾರ ಕಳ್ಳತನ ನಡೆದಿರುವ ಬಗ್ಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಅದೇ ದಿನ ಸಂಜೆ ಪಣಂಬೂರು ಬೀಚ್ ಬಳಿ ನಾಲ್ವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬ್ರಿಜೇಶ್ ಅಪಾರ್ಟ್‌ಮೆಂಟ್‌ನ ಎರಡು ನಿವಾಸಗಳಿಗೆ ಕನ್ನ ಹಾಕಿ ದೆಹಲಿಗೆ ಪರಾರಿಯಾಗಲು ಯೋಜಿಸುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ದೆಹಲಿಯ ಮೊಹಮ್ಮದ್ ಆಶಿಫ್ ಅಲಿಯಾಸ್ ಆಶಿಫ್ (23) ಮತ್ತು ಶೇಖ್ ಮೈದುಲ್ (25) ಹಾಗೂ ಪಶ್ಚಿಮ ಬಂಗಾಳದ ರಫೀಕ್ ಖಾನ್ (24) ಮತ್ತು ದೆಹಲಿಯ ವಕೀಲ ಅಹಮದ್ (34) ಎಂದು ಗುರುತಿಸಲಾಗಿದೆ.

ಕಳ್ಳತನ ಮಾಡಿದ ಚಿನ್ನಾಭರಣ ಮತ್ತು ನಗದು, ಕಟ್ಟರ್‌ಗಳು, ಸ್ಕ್ರೂಡ್ರೈವರ್‌ಗಳು ಮತ್ತು ಚೂಪಾದ ಕಬ್ಬಿಣದ ರಾಡ್ ಸೇರಿದಂತೆ ಕೃತ್ಯಕ್ಕೆ ಬಳಸಲಾದ ಉಪಕರಣಗಳು, ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮಧ್ಯಾಹ್ನ 1 ಗಂಟೆಯಿಂದ 3 ರವರೆಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದೆ ಬೀಗ ಹಾಕಿರುವ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೋರ್ವ ಅತಿಥಿಗಳಾದ ಗಣೇಶ ಐತಾಳ್ ನಿವೃತ್ತ ಅಧ್ಯಾಪಕರು ಕೊಕ್ಕಡ ಇವರು ಸಂಸ್ಕಾರ ಪಡೆದಂತಹ ವ್ಯಕ್ತಿಯು ದಾರಿ ತಪ್ಪಲಾರ ಅಂತಹ ಸಂಸ್ಕಾರವನ್ನು ಕಲಿಸುವಂತಹ ಕೆಲಸವನ್ನು ಈ ವಿದ್ಯಾಲಯ ಮಾಡುತ್ತಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಯನ್ನು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಡಾ.ಶ್ರೀಶ ಭಟ್ ಇವರು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಮುರಳೀಧರ ಇವರು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮೂಲಚಂದ್ರ ಕಾಂಚನ ಹಾಗೂ ಮುಖ್ಯ ಗುರುಗಳಾದ ಗಣೇಶ ವಾಗ್ಲೆ ಇವರು ಉಪಸ್ಥಿತರಿದ್ದರು.
ಮೂಲಚಂದ್ರ ಕಾಂಚನ ಸ್ವಾಗತಿಸಿ, ಗಣೇಶ್ ವಾಗ್ಲೆ ಧನ್ಯವಾದವಿತ್ತರು, ಶ್ರೀಮತಿ ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!