ಲಾರಿ ಅಡಿ ಸಿಲುಕಿದ ವಿದ್ಯಾರ್ಥಿನಿ ಗಂಭೀರ

ಶೇರ್ ಮಾಡಿ

ಬೆಳ್ತಂಗಡಿ: ಟಿಪ್ಪರ್‌ ಚಾಲಕನ ಅತೀವೇಗದ ಚಾಲನೆಯಿಂದಾಗಿ 2 ಸಾರಿಗೆ ಬಸ್‌ಗಳು, 4 ಕಾರುಗಳು, 1 ಆಟೋ ಮತ್ತು ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳ್ತಂಗಡಿ ನಗರದ ಭಾರತ್‌ ಶೋರೂಂ ಬಳಿ ಸಂಭವಿಸಿದೆ.

ಬಳಂಜ ಗ್ರಾಮದ ಗುಂಡೇರಿ ನಿವಾಸಿ ವೀಕ್ಷಾ(17) ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಟಿಪ್ಪರ್‌ ಚಾಲಕ ಸುರೇಶ್‌ ವಿರುದ್ಧ ದೂರು ದಾಖಲಾಗಿದೆ.

ಉಜಿರೆಯಿಂದ ಗುರುವಾಯನ ಕೆರೆಗೆ ಬರುತ್ತಿದ್ದ KL 13 L 6078 ಟಿಪ್ಪರ್‌ ಚಾಲಕ ಗುರುವಾಯನಕೆರೆ ಕಡೆಯಿಂದ ಉಜಿರೆ ಕಡೆಗೆ ಸಾಗುತ್ತಿದ್ದ ಒಂದು ಸಾರಿಗೆ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದ ಟಿಪ್ಪರ್‌, ಅದೇ ದಾರಿಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಮತ್ತೂಂದು ಸಾರಿಗೆ ಬಸ್ಸಿನ ಮುಂಭಾಗಕ್ಕೆ ಢಿಕ್ಕಿಯಾಗಿದೆ.

ಢಿಕ್ಕಿ ರಭಸಕ್ಕೆ ಟಿಪ್ಪರ್‌ ಸಮೀಪದಲ್ಲಿದ್ದ ಶೋ ರೂಂ ಕಡೆ ತಿರುಗಿದ್ದು ಇದೇ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೀಕ್ಷಾ ವರಿಗೆ ಢಿಕ್ಕಿಯಾಗಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿಯಾದ ಪರಿಣಾಮ ಒಟ್ಟು 8 ವಾಹನಗಳು ಜಖಂಗೊಂಡವು.

ವೀಕ್ಷಾ ಲಾರಿಯಡಿ ಸಿಲುಕಿದ್ದರಿಂದ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತತ್‌ಕ್ಷಣವೇ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ವೀಕ್ಷಾ ವೇಣೂರು ಸರಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ ಲಾೖಲ ಸಿರಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ತರಬೇತಿಗೆ ಸೇರಿದ್ದರು. ಈ ಸಲುವಾಗಿ ಮಧ್ಯಾಹ್ನ ತರಗತಿಗೆ ಸ್ನೇಹಿತೆಯೊಂದಿಗೆ ನಡೆದುಕೊಂಡು ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮತ್ತೋರ್ವ ಯುವತಿಗೆ ಅಪಘಾತವಾಗುವುದು ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

error: Content is protected !!