ನೆಲ್ಯಾಡಿ ಸ್ಯಾಪೆಂನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜಿನ “ಸ್ಟಾರ್ ಆಫ್ ಈಯರ್”- ರಿಜೋ ಜೋಸೆಫ್

ಶೇರ್ ಮಾಡಿ

ನೆಲ್ಯಾಡಿ ಸ್ಯಾಪೆಂನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜಿನ 2022-23 ನೇ ಸಾಲಿನ “ಸ್ಟಾರ್ ಆಫ್ ದೀ ಈಯರ್” ಆಗಿ ಕೊಪ್ಪ ಕೆರ್ನಡ್ಕ ನಿವಾಸಿ ಹಾಗೂ ಕಾಲೇಜಿನ ಮೂರನೇ ವರ್ಷದ ಬಿ.ಕಾಂ ವಿದ್ಯಾರ್ಥಿ ರಿಜೋ ಜೋಸೆಫ್ ಅವರು ಆಯ್ಕೆಯಾಗಿದ್ದಾರೆ.

ಪ್ರಸ್ತುತ 2022-23ನೇ ಸಾಲಿನಲ್ಲಿ ಕಲಿಕೆ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ರಿಜೋ ಜೊಸೇಫ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ರೆ.ಫಾ ತೋಮಸ್ ಬಿಜಿಲಿ ಅವರು ಪ್ರಶಸ್ತಿಯನ್ನು ನೀಡಿದರು.

ರಿಜೋ ಜೊಸೇಫ್‌ ಅವರು ಜೋಶಿ ಮತ್ತು ರೀನಾ ದಂಪತಿಗಳ ಪುತ್ರ ಮತ್ತು ರಿಯಾ ಜೊಸೇಫ್ ಅವರ ಸಹೋದರ. ರಿಜೋ ಅವರು ಮುಂದಕ್ಕೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಚೆಯನ್ನು ಹೊಂದಿದ್ದಾರೆ.

Leave a Reply

error: Content is protected !!