ಇಚ್ಲಂಪಾಡಿಯ ಜನತೆ ಇತ್ತೀಚೆಗೆ ಕಾಡಾನೆಗಳ ದಾಳಿಯಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ತಲೆದೋರಿದೆ.ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು ಪದೇ ಪದೇ ಘಟನೆ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ .
ನಿನ್ನೆ ತಡರಾತ್ರಿ ಪುಂಡಾನೆಗಳು ಇಚ್ಲಂಪಾಡಿ ಬಿಜೇರು ನಿವಾಸಿ ಬಿಂದು ಸಂತೋಷ್ ಎಂಬವರ ಮನೆಯ ತಡೆಗೋಡೆಯನ್ನು ಕೂಡ ಹಾನಿಮಾಡಲಾಗಿದೆ ಎಂದು ಅಧಿಕೃತ ಮೂಲಗಳಿದ ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ತಮ್ಮಯ್ಯ ಗೌಡ ಬರೆಮೇಲು ಅವರ ತೋಟಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿಯ ಬೆಳೆ ಹಾನಿಗೊಳಿಸಿದ್ದಲ್ಲದೆ ಅವರ ಪಂಪ್ ಸೆಟ್ ಸಹಿತ ಪುಡಿಗೈದಿದೆ. ರೋಯ್ ಟಿ ಕೆ ಕಲ್ಲರ್ಬ, ಪ್ರವೀಣ್ ಕುಮಾರ್ ಕುಂಙಿಮಾರ್ , ಗುಂಡಿಕಂಡ ಜೋಸ್,ಜೋರ್ಜ್ ,ಫಿಲಿಪ್ ಅವರ ತೋಟವನ್ನು ಧ್ವಂಸ ಗೊಳಿಸಿದೆ. ಅರಣ್ಯ ಇಲಾಖೆ ಕೂಡಲೇ ಈ ಪುಂಡಾನೆಗಳನ್ನು ಹಿಡಿದು ತೆರವು ಗೊಳಿಸಬೇಕೆಂದು ಕೃಷಿಕರು ಒಕ್ಕೊರಳಿನ ಆಗ್ರಹ ಮಾಡಿದ್ದಾರೆ. ಮನವಿಗೆ ಸ್ಪಂದಿಸದೆ ಹೋದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
Photos