ಕಂಠಪೂರ್ತಿ ಕುಡಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಕಂಠಪೂರ್ತಿ ಕುಡಿದು ನಶೆಯಲ್ಲಿ ಕಿಡಿಗೇಡಿಗಳು ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ವಸಂತನಗರದ ಮಾರಿಯಮ್ಮ ಸ್ಟ್ರೀಟ್‌ನಲ್ಲಿ ನಡೆದಿದೆ.

ಕಿಡಿಗೇಡಿಗಳು ಬೆಳಗ್ಗಿನ ಜಾವ 5 ಗಂಟೆ ವೇಳೆಗೆ ದುಷ್ಕೃತ್ಯ ಎಸಗಿದ್ದಾರೆ. ಇದರಿಂದ 5 ಬೈಕ್‌ಗಳು ಸುಟ್ಟು ಕರಕಲಾಗಿವೆ. ದುಷ್ಕರ್ಮಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆಯಲ್ಲಿ ಆಕ್ಟೀವಾ, ಆರ್15, ಆಕ್ಸಸ್, ಬಜಾಜ್ ಡಾಮನೋರ್, ಎಂಟರ್ ಬೈಕ್‌ಗಳು ಸಂಪೂರ್ಣ ಸುಟ್ಟು ಹೋಗಿವೆ. ಬೈಕ್‌ಗಳ ಪಕ್ಕ ನಿಲ್ಲಿಸಿದ್ದ ಕಾರ್‌ಗೂ ಬೆಂಕಿಯ ಕಿಡಿ ತಾಗಿದ್ದು, ಸದ್ಯ ದೊಡ್ಡ ಮಟ್ಟದ ಹಾನಿಯಾಗಿಲ್ಲ.

ಕಿಡಿಗೇಡಿಗಳು ಕೃತ್ಯ ಎಸಗುವುದಕ್ಕೂ ಮುನ್ನ ರಸ್ತೆಯಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಯುವಕರ ಪತ್ತೆಗೆ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ.

Leave a Reply

error: Content is protected !!