ನೆಲ್ಯಾಡಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಶಾಂತಿ ಕದಡುತ್ತಿದ್ದ ಐವರು ಯುವಕರ ವಶ: ಇಬ್ಬರು ಪರಾರಿ

ಶೇರ್ ಮಾಡಿ

ನೆಲ್ಯಾಡಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದು ಕೊಂಡಿದ್ದ ಆರೋಪದಲ್ಲಿ ಐವರು ಯುವಕರನ್ನು ನೆಲ್ಯಾಡಿ ಹೊರಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಆ.4ರಂದು ರಾತ್ರಿ ನೆಲ್ಯಾಡಿಯಲ್ಲಿ ನಡೆದಿದೆ. ಈ ವೇಳೆ ಆರೋಪಿಗಳ 2 ಬೈಕ್, 5 ಮೊಬೈಲ್ ಫೋನ್‌ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.

ಪೆರಾಬೆ ಗ್ರಾಮದ ಮಲಯಾಳ ತೋಟ ಸುರುಳಿ ನಿವಾಸಿ ಮಹೇಶ್ ಕೆ.(30ವ.), ಪೆರಾಬೆ ಗ್ರಾಮದ ಸುರುಳಿ ನಿವಾಸಿ ಅಶ್ವತ್(26ವ.), ಕುದ್ಮಾರು ಗ್ರಾಮದ ಪಟ್ಟೆ ಮನೆ ನಿವಾಸಿ ಸ್ವರೂಫ್ ಪಟ್ಟೆ(25ವ.). ಪೆರಾಬೆ ಗ್ರಾಮದ ಮನವಳಿಕೆ ನಿವಾಸಿ ಅಖಿಲೇಶ್ ರೈ (21ವ.) ಹಾಗೂ ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ ಲಕ್ಷ್ಮಣ ಗೌಡ ಯಾನೆ ಚೆನ್ನಪ್ಪ ಗೌಡ (45ವ.) ಪೊಲೀಸರ ವಶವಾದ ಆರೋಪಿಗಳು. ಇವರೆಲ್ಲರೂ ಆ.4ರಂದು ರಾತ್ರಿ 10.45ರ ವೇಳೆಗೆ ನೆಲ್ಯಾಡಿ ಗ್ರಾಮದ ನೆಲ್ಯಾಡಿ ಬೆಥನಿ ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಕೈ ಕೈ ಮಿಲಾಯಿಸಿ ಸಾರ್ವಜನಿಕರ ಶಾಂತಿ ಕದಡುವ ಹಾಗೂ ಭಯ ಹುಟ್ಟಿಸುವ ರೀತಿಯಲ್ಲಿ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಇಬ್ಬರು ಸ್ಥಳದಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ. ಅಲ್ಲದೇ ಘಟನಾ ಸ್ಥಳದಿಂದ ಕೆಎ21, ವೈ1988 ಹಾಗೂ ಕೆಎ21, ಕ್ಯೂ0978 ನಂಬರ್‌ನ ಎರಡು ಬೈಕ್, 5 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಉಪ್ಪಿನಂಗಡಿ ಪೊಲೀಸ್ ಠಾಣಾಯಲ್ಲಿ ಕಲಂ: 160 ಭಾ.ದಂ.ಸಂ.ನಂತೆ ಪ್ರಕರಣ ದಾಖಲಾಗಿದೆ.
ಶನಿವಾರ ಜಾಮೀನಿನ ಮೇಲೆ ಯುವಕರು ಬಿಡುಗಡೆಯಾಗಿದ್ದಾರೆ

Leave a Reply

error: Content is protected !!