ಯುವ ಭಾಷಣಗಾರ, ಕವಿ ಆಮಿರ್ ಬನ್ನೂರು ಅವರ ”ಕಣ್ಣೀರಿಗೆ ಊರು ತುಂಬದಿರಲಿ” ಎಂಬ ಕವನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ
ಬಿ.ಕಾಂ., ಬಿ.ಬಿ.ಎ., ಐ.ಎಂ.ಬಿ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣಗೊಂಡಿದೆ.
”ಕಣ್ಣೀರಿಗೆ ಊರು ತುಂಬದಿರಲಿ” ಕವನವು ಸತಿಪತಿಯರ ಬಂಧ ಸಂಬಂಧ ಕೇವಲ ದೈಹಿಕವಾಗಿರದೇ ಬದುಕನ್ನು ಬೆಸೆಯುವ ಕೊಂಡಿಯಾಗಿರುವುದು. ಜೊತೆಗೆ ನಂಬಿಕೆ, ಪ್ರೀತಿ ಆಳವಾಗಿ ಬೇರೂರಿದಾಗಿದಾಗಲೇ ಅದಕ್ಕೆ ಅರ್ಥ ಬರುವುದು ಎನ್ನುತ್ತದೆ.
ಕೆ.ಎ ಆಮಿರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾಗಿದ್ದು, ಕೆ.ಎಚ್ ಅಬ್ದುಲ್ಲ ಮುಸ್ಲಿಯಾರ್, ತಾಯಿ ಖತೀಜ ದಂಪತಿ ಪುತ್ರನಾಗಿದ್ದಾರೆ. ಪ್ರೌಢ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಮುಗಿಸಿ. ಉನ್ನತ ವಿದ್ಯಾಭ್ಯಾಸವನ್ನು ಅರಬಿಕ್ ಭಾಷೆಯಲ್ಲಿ ಕೇರಳದ ಕಲ್ಲಿಕೋಟೆಯಲ್ಲಿರುವ ಸಿರಾಜುಲ್ ಹುದಾ ಕುಟ್ಯಾಡಿಯಲ್ಲಿ ಪ್ರಾರಂಭಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸುರಿಬೈರಿನಲ್ಲಿ ನೆಲೆಸಿರುವ ದಾರುಲ್ ಅಶ್ ಅರಿಯ್ಯದಲ್ಲಿ ಅರಬಿಕ್ ಪದವಿಯನ್ನು ಮುಗಿಸುವುದರ ಮೂಲಕ ಹನೀಫಿ ಅಲ್ ಅಶ್’ಅರೀ ಪದವಿಯನ್ನು ಪಡೆದಿದ್ದಾರೆ.
ಸದ್ಯ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಧಾರ್ಮಿಕ ಶಿಕ್ಷಕರಾಗಿ ಕಾರ್ಯಾಚರಿಸುತ್ತಿದ್ದಾರೆ.