2024ನೇ ಸಾಲಿನ ನವೋದಯ ವಿದ್ಯಾಲಯಗಳ 6ನೇ ಕ್ಲಾಸ್ ಪ್ರವೇಶಾತಿ ಆಯ್ಕೆ ಪರೀಕ್ಷೆ ಅರ್ಜಿಗೆ ದಿನಾಂಕ ವಿಸ್ತರಣೆ

ಶೇರ್ ಮಾಡಿ

ಜವಾಹರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ 2024-25ನೇ ಸಾಲಿನಲ್ಲಿ ಪ್ರವೇಶ ಪಡೆಯುವ ಸಂಬಂಧ, ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಲಾಗಿದೆ.

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನ ಸ್ವಾಯತ್ತ ಸಂಸ್ಥೆ ಆಗಿರುವ ಜವಾಹರ ನವೋದಯ ವಿದ್ಯಾಲಯಗಳಲ್ಲಿ 2024-25ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯುವ ಸಂಬಂಧ, ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಇದೀಗ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ. ಆಡಳಿತಾತ್ಮಕ ಕಾರಣಗಳಿಂದಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 17ನೇ ಆಗಸ್ಟ್‌ 2023 ರವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪೋಷಕರು ತಮ್ಮ ಮಕ್ಕಳನ್ನು ನವೋದಯ ವಿದ್ಯಾಲಯಗಳಲ್ಲಿ ದಾಖಲಾತಿ ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಇನ್ನು 7 ದಿನಗಳೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಪ್ರಸ್ತುತ 5 ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-08-2023
ಜವಾಹರ ನವೋದಯ ವಿದ್ಯಾಲಯ ವೆಬ್‌ಸೈಟ್‌ : www.navodaya.gov.in

6ನೇ ತರಗತಿ ಪ್ರವೇಶ ಪರೀಕ್ಷೆಗೆ ಈಗಾಗಲೇ ರಿಜಿಸ್ಟ್ರೇಷನ್‌ ಪಡೆದ ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ಏನಾದರೂ ಮಾಹಿತಿ ತಪ್ಪಿದ್ದಲ್ಲಿ, ತಿದ್ದುಪಡಿಯನ್ನು ಈ ದಿನಾಂಕದೊಳಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ಲಿಂಗ, ಕೆಟಗರಿ, ಗ್ರಾಮೀಣ ಅಭ್ಯರ್ಥಿ ಮತ್ತು ನಗರ ಅಭ್ಯರ್ಥಿ, ಅಂಗವೈಕಲ್ಯ, ಪರೀಕ್ಷೆ ಮಾಧ್ಯಮ ವಿಷಯಗಳನ್ನು ಮಾತ್ರ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇರುತ್ತದೆ.

JNVST 2024 ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಕೆ ವಿಧಾನ

  • ನವೋದಯ ವಿದ್ಯಾಲಯ ಸಮಿತಿ ಅಧಿಕೃತ ವೆಬ್‌ಸೈಟ್‌ navodaya.gov.in ಗೆ ಭೇಟಿ ನೀಡಿ.
  • ಓಪನ್‌ ಆದ ಪೇಜ್‌ನಲ್ಲಿ ‘CLICK HERE TO SUBMIT ONLINE APPLICATION FORM FOR CLASS VI JAWAHAR NAVODAYA VIDYALAYA SELECTION TEST 2024. THE LAST DATE TO APPLY IS 17-08-2023” ಎಂದಿರುವ ಲಿಂಕ್‌ ಕ್ಲಿಕ್ ಮಾಡಿ.
  • ನಂತರ ಎನ್‌ವಿಎಸ್‌ನ ಮತ್ತೊಂದು ಪೇಜ್‌ ಓಪನ್ ಆಗುತ್ತದೆ. ಈ ಪೇಜ್‌ನಲ್ಲಿ ‘ Click here to Class VI Registration‘ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಅಪ್ಲಿಕೇಶನ್‌ ಸಲ್ಲಿಸುವ ಪುಟ ಓಪನ್‌ ಆಗುತ್ತದೆ. ಅಗತ್ಯ ಮಾಹಿತಿಗಳನ್ನು ನೀಡಿ, JNVST 2024 ಗೆ ರಿಜಿಸ್ಟ್ರೇಷನ್‌ ಮಾಡಿ.
  • ಮುಂದಿನ ರೆಫರೆನ್ಸ್‌ಗಾಗಿ ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಿ.

2024-25ನೇ ಸಾಲಿಗೆ ನವೋದಯ 6ನೇ ತರಗತಿ ಪ್ರವೇಶ: ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ಮಾಹಿತಿ ಇಲ್ಲಿದೆ

JNVST ಆಯ್ಕೆ ಪರೀಕ್ಷೆ ಮಾದರಿ
ಜವಾಹರ ನವೋದಯ ವಿದ್ಯಾಲಯಗಳ 6ನೇ ತರಗತಿ ಪ್ರವೇಶಕ್ಕೆ ಆಯ್ಕೆಯ ಅರ್ಹತಾ ಪರೀಕ್ಷೆಯು 100 ಅಂಕಗಳಿಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. 80 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಗಣಿತ, ಭಾಷೆ, ಮೆಂಟಲ್‌ ಎಬಿಲಿಟಿ ಕುರಿತ ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿಗಳು ಒಎಂಆರ್‌ ಶೀಟ್‌ನಲ್ಲಿ ಉತ್ತರಿಸಬೇಕಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬ್ಲಾಕ್‌ ಮತ್ತು ಬ್ಲೂ ಪೆನ್‌ ಮಾತ್ರ ಬಳಸಬೇಕು. ಪರೀಕ್ಷೆಗೆ ಒಂದು ವಾರ ಮುಂಚೆ ಪ್ರವೇಶ ಪತ್ರ ಬಿಡುಗಡೆ ಮಾಡಲಿದ್ದು, ಅಭ್ಯರ್ಥಿಗಳು ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ವೇಳೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

Leave a Reply

error: Content is protected !!