ದಿಢೀರ್ ಕುಸಿದ ಟೊಮೆಟೋ ರೇಟ್- ಕೆ.ಜಿಗೆ 40ಕ್ಕೆ ಕುಸಿದ ದರ

ಶೇರ್ ಮಾಡಿ

ದಿಢೀರ್ ಕುಸಿದ ಟೊಮೆಟೋ ರೇಟ್- ಕೆ.ಜಿಗೆ 40ಕ್ಕೆ ಕುಸಿದ ದರ

ಕೆಲವು ದಿನಗಳಿಂದ ಚಿನ್ನದಂತಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಇಳಿಕೆ ಕಂಡಿದೆ.

ಹೌದು. 200 ರೂ. ಗಡಿ ದಾಟಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಟೊಮೆಟೋ ಬೆಲೆ ಈಗ ಏಕಾಏಕಿ ಕುಸಿದಿದೆ. ಸದ್ಯ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ.

ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದೆ. 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ. ಕಳೆದ ನಾಲ್ಕೈದು ದಿನದ ಹಿಂದೆ ಟೊಮ್ಯಾಟೊ ದರ 150 ರಿಂದ 169 ರೂಪಾಯಿ ಇತ್ತು. ಒಂದು ಕ್ರೇಟ್ ಗೆ 2,000 ಇತ್ತು. ಇಂದು ಒಂದು ಕ್ರೇಟ್ ಗೆ 1,500 ರೂಪಾಯಿ ಆಗಿದೆ.
ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ದರ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ ಟೊಮೆಟೋ ಸರಬರಾಜು ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಂಪು ಸುಂದರಿಯ ಬೆಲೆ ಕಡಿಮೆ ಆಗಿದೆ. ಬೆಲೆ ಕಡಿಮೆ ಆದ ಮೇಲೆ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

Leave a Reply

error: Content is protected !!