ನೇಸರ ಜ.19: ಕಡಬ ತಾಲೂಕು ಇಚಿಲಂಪಾಡಿ ಸಂತ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ “ಸುವರ್ಣ ಮಹೋತ್ಸವಕ್ಕೆ ಕಾಲಿಡುವ ಶುಭ ನೆನಪಿನ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಮತ್ತು ಸ್ವರ್ಗಸ್ಥ ಬಿಷಪ್ ದಿ.ಪೂಜ್ಯ ಗೀವರ್ಗೀಸ್ ಮಾರ್ ದಿವಾನ್ನಸಿಯೋಸ್ ರವರು ಉಪಯೋಗಿಸಿದ್ದ ಪವಿತ್ರ ವಸ್ತುಗಳನ್ನು ಪರಮಪೂಜ್ಯ ಗೀವರ್ಗೀಸ್ ಮಾರ್ ಮಕರಿಯೋಸ್,ಧರ್ಮಾಧ್ಯಕ್ಷರು ಪುತ್ತೂರು ಧರ್ಮಪ್ರಾಂತ್ಯ ರವರು ದೇವಾಲಯದಲ್ಲಿ ಸ್ಥಾಪಿಸಿದರು.
ಪವಿತ್ರ ಪೂಜೆಗಳು ನಡೆದ ನಂತರ “ಸುವರ್ಣ ಮಹೋತ್ಸವ” ನೆನಪಿಗಾಗಿ ಕ್ಯಾಂಡಲ್ ಉರಿಸಲಾಯಿತು,ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕರಿಯೋಸ್ ರವರು ವಹಿಸಿ ಮಾತನಾಡುತ್ತಾ ಇಂದಿನಿಂದ ಆರಂಭವಾಗುವ ಸುವರ್ಣಮಹೋತ್ಸವ ಪ್ರತಿ ಮನೆ ಮನೆಯಲ್ಲಿ ಹಬ್ಬದ ವಾತಾವರಣ ವಿರಲಿ. ಅದರೊಂದಿಗೆ ವರ್ಷವಿಡಿ ಪ್ರತಿಮನೆಯಲ್ಲೂ ಬೈಬಲ್ ಪಠಣ ನಡೆಯುವುದರೊಂದಿಗೆ
ನಮ್ಮ ಆತ್ಮ ಶುದ್ದಿಯಾಗಲಿ.ಮುಂದಿನ ವರ್ಷ 2023ರಲ್ಲಿ ಇದೇ 16 ನೇ ತಾರೀಕಿನಂದು ಸುವರ್ಣಮಹೋತ್ಸವದ ಸಮಾಪನಾ ನಡೆಯಲು ಭಗವಂತ ಅನುಗ್ರಹಿಸಲಿ ಅದರೊಂದಿಗೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರಿಗೆ ಜಾತಿ-ಮತಭೇದವಿಲ್ಲದೆ ಸಂತ ತೋಮಸರ ಅನುಗ್ರಹವಿರಲಿ ಎಂದು ಪ್ರಾರ್ಥಿಸಿ ಆಶೀರ್ವದಿಸಿದರು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ವೇ|ರೆ|ಎಲ್ದೋ ಪುತ್ರನ್ ಕಂಡತ್ತಿಲ್,ಮುಖ್ಯಗುರುಗಳು ಪುತ್ತೂರು ಧರ್ಮಪ್ರಾಂತ್ಯ,ವೇ|ರೆ|ಫಾ.ವರ್ಗೀಸ್ ಕೈಪನಡ್ಕ ಔIಅ( ವೈಸ್ ಪ್ರೇವಿನ್ ಷಿಯಸ್ ಬೆಥನಿ ನವಜ್ಯೋತಿಪ್ರೊವೇನ್ಷಿಯನ್),ಫಾ.ಪಿ.ಕೆ ಅಬ್ರಹಾಂ ಕೊರ್ ಎಪಿಸ್ಕೋಪ,ವಿಕಾರ್ ಸಂತ ಮೇರಿ ಚರ್ಚ್ ಕುಂತೂರು,ಫಾ.ಮೆಲ್ವಿನ್ ಮ್ಯಾಥ್ಯು ವಿಕಾರ್ ಸಂತ ತೋಮಸ್ ಚರ್ಚ್ ಇಚಿಲಂಪಾಡಿ ಉಪಸ್ಥಿತರಿದ್ದರು.
ಚರ್ಚಿನ ವಿಕಾರ್ ಸ್ವಾಗತಿಸಿದರು, ಮ್ಯಾಥ್ಯೂ ಪೂಝೀಕಾಟ್ಟಿಲ್ ಧನ್ಯವಾದ ಸಮರ್ಪಿಸಿದರು,ಜಿಮ್ಸನ್ ಕಲ್ಲಂಪರಂಬಿಲ್ ನಿರೂಪಿಸಿದರು.ನಂತರ ಆಶೀರ್ವಚನ ಮತ್ತು ಅನ್ನಸಂತರ್ಪಣೆ ನಡೆದು ಸಮಾರಂಭ ಸಮಾಪನಗೊಂಡಿತು.