ಒಂದು ವೇಳೆ ರಸ್ತೆ ಬಂದ್ ಮಾಡಿದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು.ಕಿಶೋರ್ ಶಿರಾಡಿ,ಸಂಚಾಲಕರು, ಮಲೆನಾಡು ಜನಹಿತರಕ್ಷಣಾ ವೇದಿಕೆ ನೀಡಿದ್ದಾರೆ.
ನೇಸರ ಜ.18: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹೆಸರಿನಲ್ಲಿ ಶಿರಾಡಿ ಘಾಟ್ ರಸ್ತೆ ಬಂದ್ ವಿರೋಧಿಸಿ ಜ.18 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ(ರಿ)ಕರ್ನಾಟಕ ಇದರ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಮಲೆನಾಡು ಜನಹಿತರಕ್ಷಣಾ ವೇದಿಕೆಯು ದ.ಕ ಜಿಲ್ಲೆಗೆ ಹೊರ ಜಿಲ್ಲೆಯಿಂದ ಬರುವ ಎಲ್ಲಾ ಘಾಟಿ ರಸ್ತೆಗಳನ್ನು ಸಂಬಂಧಪಟ್ಟ ಇಲಾಖೆಯು ಅವಶ್ಯಕತೆ ಇಲ್ಲದೆ ಬಂದು ಮಾಡಿದಾಗ ದ.ಕ ಜಿಲ್ಲೆಯ ಜನರ ಒಳಿತಿಗಾಗಿ ಮತ್ತು ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಯ ಸಂಪರ್ಕವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ.
ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ದ.ಕ ಜಿಲ್ಲೆಯನ್ನು ಮತ್ತು ಪಶ್ಚಿಮ ಘಟ್ಟಗಳಿಗೆ ತಾಗಿಕೊಂಡಿರುವ ಜಿಲ್ಲೆಯನ್ನು ಜನಸಾಮಾನ್ಯರನ್ನು ಬೀದಿಪಾಲು ಮಾಡುವಂತಹ ಯೋಜನೆ ಕೇವಲ 80 ಕಿಮೀ ಕಾಮಗಾರಿ ಮಾಡಲು ಎರಡು ವರ್ಷಗಳಿಗೊಮ್ಮೆ ವರ್ಷಾನುಗಟ್ಟಲೆ ಮಾಡಿ,ಜನರಿಗೆ ಮಾನಸಿಕ ಕಿರುಕುಳ,ಜಿಲ್ಲೆಯ ಜನರನ್ನು ನಿರ್ಗತಿಕರನ್ನಾಗಿ ಮಾಡುವ N H I ಅಧಿಕಾರಿಗಳಿಂದ ಷಡ್ಯಂತರ ನಡೆಯುತ್ತಿದೆ.ಇದರ ವಿರುದ್ಧ ಸಂಪೂರ್ಣ ದಕ್ಷಿಣ ಕನ್ನಡ ಜಿಲ್ಲೆಯ ಜನ ಮತ್ತು ಹೊರ ಜಿಲ್ಲೆಯ ನಾಗರಿಕರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಭಿಕ್ಷೆ ಬೇಡುವಂಥ ಪರಿಸ್ಥಿತಿ ಉದ್ಭವವಾಗುತ್ತದೆ.ಈ ನಿಟ್ಟಿನಲ್ಲಿ ಶಿರಾಡಿ ಘಾಟಿ ರಸ್ತೆ ಉಳಿಸಿ ಹೋರಾಟ ಸಮಿತಿಯು 20/01/2022ರ ಗುರುವಾರ ಬೆಳಗ್ಗೆ 10.30 ರ ಸಮಯಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ವೀಕ್ಷಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಸ್ತೆ ಬಂದ್ ಮಾಡದೇ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹೇರುವ ಸಭೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಒಂದು ವೇಳೆ ರಸ್ತೆ ಬಂದ್ ಮಾಡಿದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು.ಕಿಶೋರ್ ಶಿರಾಡಿ,ಸಂಚಾಲಕರು, ಮಲೆನಾಡು ಜನಹಿತರಕ್ಷಣಾ ವೇದಿಕೆ ನೀಡಿದ್ದಾರೆ.
ಸಭೆ ನಿರ್ಣಯ:
- ಶೈಕ್ಷಣಿಕ ಕ್ಷೇತ್ರದಲ್ಲಿ ಹೊರ ಜಿಲ್ಲೆಯಿಂದ ಬರುವಂತಹ ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ಸಮಸ್ಯೆಯಾಗುತ್ತದೆ.ಅದೇ ರೀತಿ ಜಿಲ್ಲೆಯವರಿಗೂ ಸಮಸ್ಯೆಯಾಗುತ್ತದೆ.
- ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಬೆಂಗಳೂರು-ಮಂಗಳೂರು ತುರ್ತು ಸೇವೆಗೆ ತೊಂದರೆಯಾಗುತ್ತದೆ.
- ಉದ್ಯಮಿಗಳಿಗೆ,ವ್ಯಾಪಾರಸ್ಥರಿಗೆ,ರಸ್ತೆಬದಿ ಗೂಡಂಗಡಿಯಲ್ಲಿ ವ್ಯಾಪಾರಮಾಡುವ ಕುಟುಂಬಸ್ಥರು ಬೀದಿಪಾಲಾಗುವ ಸಂಭವಿದೆ.
- ಇಡೀ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಕುಂಠಿತವಾಗುತ್ತದೆ.
- ಹೊರ ಜಿಲ್ಲೆಯಿಂದ ಬರುವಂತಹ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೇರಿ ಸಂಪೂರ್ಣ ಜಿಲ್ಲೆ ಬರಗಾಲದಂತಹ ಪರಿಸ್ಥಿತಿ ಉಂಟಾಗುತ್ತದೆ.
- ಧಾರ್ಮಿಕ ಕ್ಷೇತ್ರಗಳಿಗೆ ಬರುವಂತಹ ಯಾತ್ರಾತ್ರಿಗಳಿಗೆ ತೊಂದರೆ ಆಗುತ್ತದೆ.
ಈ ಸಂದರ್ಭದಲ್ಲಿ ರವೀಂದ್ರ, ವಿಜಯ ಕುಮಾರ್ ಶಿರಾಡಿ, ಶೇಖರಪ್ಪ, ಈಶ್ವರ ಗೌಡ,ಹರೀಶ್, ಶ್ರೀಜಿತ್. ಮೊದಲಾದವರು ಉಪಸ್ಥಿತರಿದ್ದರು.