ಪುತ್ತೂರು ಖಾಸಗಿ ಆಸ್ಪತ್ರೆಯ ಮುಂದೆ ಧರಣಿ; ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಾಲಕ ಸಾವು: ಆರೋಪ

ಶೇರ್ ಮಾಡಿ

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೊಟ್ಟೆನೋ ವೆಂದು ದಾಖಲಾಗಿ ಶಸ್ತ್ರಚಿಕಿತ್ಸೆಗೊಳಪಟ್ಟ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಆ.14ರಂದು ಸಂಭವಿಸಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾ| ಕಸಬಾ ಗ್ರಾಮದ 17 ವರ್ಷದ ಬಾಲಕ ಶ್ರೀಜಿತ್‌ ಮೃತಪಟ್ಟಾತ. ಬಾಲಕನಿಗೆ ಹೊಟ್ಟೆ ನೋವೆಂದು ಆ. 12ರಂದು ರಾತ್ರಿ ಪುತ್ತೂರಿನ ಹಳೆ ತಾಲೂಕು ಕಚೇರಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡ್ಯೂಟಿ ಡಾಕ್ಟರ್‌ ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಕೊಂಡರು. ಆ. 13ರಂದು ಬೆಳಗ್ಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸೂಚಿಸಿ ಸಂಜೆ 6 ಗಂಟೆ ವೇಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಳಿಕ ಐ.ಸಿ.ಯು. ವಾರ್ಡ್‌ಗೆ ಬಾಲಕನನ್ನು ಕರೆತಂದು ಶಸ್ತ್ರಚಿಕಿತ್ಸೆ ಮಾಡಿದ ವಿಚಾರ ತಿಳಿಸಿ ಅನಂತರದ ಚಿಕಿತ್ಸೆ ನೀಡಿದ್ದಾರೆ.
ಆ. 14ರಂದು 9 ಗಂಟೆಗೆ ಆಸ್ಪತ್ರೆಯ ವೈದ್ಯರು ಬಾಲಕನನ್ನು ನೋಡಿಕೊಳ್ಳಲು ನಮ್ಮಲ್ಲಿ ಸರಿಯಾದ ಉಪಕರಣ ಇಲ್ಲ, ತತ್‌ಕ್ಷಣ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ ಪ್ರಕಾರ ಬಾಲಕನನ್ನು ಮನೆಯ ವರೊಂದಿಗೆ ಆ್ಯಂಬುಲೆನ್ಸ್‌ ವಾಹನದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರಿಶೀಲಿಸಿದಾಗ ಬಾಲಕ ಮೃತಪಟ್ಟಿರುವ ಮಾಹಿತಿ ತಿಳಿಯಿತು ಎಂದು ಬಾಲಕನ ಚಿಕ್ಕಪ್ಪ ಕೃಷ್ಣ ಜಿ. ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನವಿ ಸ್ವೀಕಾರ
ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ದಲಿತ ಸೇವಾ ಸಮಿತಿಯು ಬಾಲಕನ ಮೃತದೇಹವನ್ನು ಇರಿಸಿ ಧರಣಿಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಜೆ. ಶಿವಶಂಕರ್‌ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಮನವೊಲಿಸಿದರು. ಬಳಿಕ ಧರಣಿ ಹಿಂಪಡೆಯಲಾಯಿತು.

ಗೂಗಲ್ ನ್ಯೂಸ್ 

ಫೇಸ್ಬುಕ್ ಪೇಜ್

🖕🖕ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🖕🖕

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

 

Leave a Reply

error: Content is protected !!