ರೆಖ್ಯ ನಾಪತ್ತೆಯಾಗಿದ್ದ ಲೋಕೇಶ್ ಮೃತದೇಹ ಗುಂಡ್ಯ ಹೊಳೆಯಲ್ಲಿ ಪತ್ತೆ

ಶೇರ್ ಮಾಡಿ

ನೆಲ್ಯಾಡಿ: ಆ.14ರ ಸಂಜೆಯಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಊರ್ನಡ್ಕ ನಿವಾಸಿ ಲೋಕೇಶ್(43ವ.)ರವರ ಮೃತದೇಹ ಆ.16ರಂದು ಮಧ್ಯಾಹ್ನದ ವೇಳೆಗೆ ಗುಂಡ್ಯ ಹೊಳೆಯಲ್ಲಿ ಪತ್ತೆಯಾಗಿದೆ.
ಆ.14ರಂದು ಸಂಜೆ ಮನೆಯಿಂದ ಉದನೆ ಪೇಟೆಗೆ ಬಂದಿದ್ದ ಲೋಕೇಶ್ ಅವರು ನಾಪತ್ತೆಯಾಗಿದ್ದರು. ಅವರ ಬೈಕ್ ಉದನೆ ಸಮೀಪ ಗುಂಡ್ಯ ಹೊಳೆಬದಿಯ ಕಡೆಂಬಿಲ ಎಂಬಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ.15ರಂದು ಸಂಜೆ ತನಕ ಅಗ್ನಿಶಾಮಕ ದಳ, ನೆಲ್ಯಾಡಿ ಹೊರಠಾಣೆಯ ಪೋಲಿಸರು ಹಾಗೂ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಗುಂಡ್ಯ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರು. ಆ.16ರಂದು ಬೆಳಗ್ಗಿನಿಂದಲೇ ಗುಂಡ್ಯ ಹೊಳೆಯಲ್ಲಿ ಹುಡುಕಾಟ ನಡೆಸಲಾಗಿದ್ದು ಮಧ್ಯಾಹ್ನದ ವೇಳೆಗೆ ನದಿ ನೀರಿನಲ್ಲಿ ಲೋಕೇಶ್ ಅವರ ಮೃತ ದೇಹ ಪತ್ತೆಯಾಗಿದೆ.


ಗೂಗಲ್ ನ್ಯೂಸ್ 

ಫೇಸ್ಬುಕ್ ಪೇಜ್

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

 

Leave a Reply

error: Content is protected !!