ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ

ಶೇರ್ ಮಾಡಿ

ಉದನೆ: ದೇಶದ 76ನೇ ಸ್ವಾತಂತ್ರ್ಯದ ಹಬ್ಬವನ್ನು ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು‌. ಕಡಬ ತಾಲೂಕಿನ ಮಾಜಿ ಯೋಧರ ಸಂಘದ ಸಹಯೋಗದೊಂದಿಗೆ ನಡೆದ ಉತ್ಸವ ಇಂದಿನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.
ಧ್ವಜಾರೋಹಣವನ್ನು ಕಡಬ ತಾಲೂಕಿನ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ಕೆ.ಸಿ ಸೈಮನ್ ನೆರವೇರಿಸಿದರು.
ಬಳಿಕ ಉದನೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯ ಘೋಷದೊಂದಿಗೆ ಯೋಧರು, ವಿದ್ಯಾರ್ಥಿಗಳು, ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು, ಪೂರ್ವ ವಿದ್ಯಾರ್ಥಿ ವೃಂದ, ಪಾಲಕರು ಮೆರವಣಿಗೆಯಲ್ಲಿ ಸಾಗಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ವಹಿಸಿದರು.
ಶಿರಾಡಿ ಗ್ರಾಮ‌ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿನೀತಾ ತಂಗಚ್ಚನ್, ಎಕ್ಸ್ ಸರ್ವಿಸ್ ಮನ್ ಅಸೋಸಿಯೇಶನ್ ದ.ಕ ಅಧ್ಯಕ್ಷರಾದ ಜೆ.ಪಿ.ಎಂ ಚೆರಿಯನ್, ಎಕ್ಸ್ ಸರ್ವಿಸ್ ಮನ್ ಕಡಬ ತಾಲೂಕು ಅಧ್ಯಕ್ಷರಾದ ಸೈಮನ್ ಕೆ.ಸಿ, ಎಕ್ಸ್ ಸರ್ವಿಸ್ ಮನ್ ಅಸೋಸಿಯೇಷನ್ ಇದರ ಸ್ಥಾಪಕಾಧ್ಯಕ್ಷರೂ, ಗೌರವಾಧ್ಯಕ್ಷರೂ ಆದ ಮ್ಯಾಥ್ಯೂ.ಟಿ‌.ಜಿ, ಎಕ್ಸ್ ಸರ್ವಿಸ್ ಮನ್ ದ.ಕ ಗೌರವಾಧ್ಯಕ್ಷರಾದ ವಾಸುದೇವ ಗೌಡ, ವೀರನಾರಿ ದ.ಕ ಇದರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ.ಕೆ ಗೀತಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸೈನಿಕ ಸೇವೆಯ ನೆನಪುಗಳನ್ನು ಹಂಚಿಕೊಂಡರು.
ನಿವೃತ್ತ ಸೈನಿಕರಾದ ಜೆ.ಪಿ.ಎಂ ಚೆರಿಯನ್, ಒ.ಜಿ ನೈನಾನ್, ವಾಸುದೇವ ಗೌಡ ದಿಕ್ಸೂಚಿ ಭಾಷಣ ಮಾಡಿದರು. ಮ್ಯಾಥ್ಯೂ ಟಿ.ಜಿ, ಶ್ರೀಮತಿ ವಿನೀತಾ ತಂಗಚ್ಚನ್ ಶುಭವನ್ನು ಹಾರೈಸಿದರು.
ಸಂಚಾಲಕರಾದ ರೆ.ಫಾ ಹನಿ ಜೇಕಪ್ ಸೈನಿಕರ ದೇಶ ಸೇವೆಯನ್ನು ಕೊಂಡಾಡಿ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದರು‌. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 60 ಜನ ಮಾಜಿ ಸೈನಿಕರನ್ನು ವಿಶೇಷವಾಗಿ ಗೌರವ ಸಮರ್ಪಿಸಲಾಯಿತು.
ಕನ್ನಡ ಮಾಧ್ಯಮದ ಮುಖ್ಯಸ್ಥರಾದ ಶ್ರೀಧರ ಗೌಡ ಮಾಜಿ ಸೈನಿಕರ ಪರಿಚಯ ಮಾಡಿದರು‌. ಬಳಿಕ ವಿದ್ಯಾರ್ಥಿಗಳಿಂದ ಹಲವು ದೇಶಭಕ್ತಿ ಕಾರ್ಯಕ್ರಮ ನೆರವೇರಿತು.
ಎರಡೂ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕ ಶಿಕ್ಷಕೇತರ ವೃಂದ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಚಾಲಕ ವೃಂದ,ಪಾಲಕರು, ಪೂರ್ವವಿದ್ಯಾರ್ಥಿಗಳು, ಅಡುಗೆ ಸಿಬ್ವಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕರಾದ ಬಾಲಕೃಷ್ಣ ಗೌಡ ಸ್ವಾಗತಿಸಿ, ದೈಹಿಕ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಸುಪ್ರೀತಾ ಹಾಗೂ ಶ್ರೀಮತಿ ವಿಲ್ಮಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


ಗೂಗಲ್ ನ್ಯೂಸ್ 

ಫೇಸ್ಬುಕ್ ಪೇಜ್

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

 

Leave a Reply

error: Content is protected !!