ಕೆ .ಏನ್ .ಎಸ್ .ಎಸ್ ಕರ್ಕಾಟಕ ಮಾಸಾದ್ಯಂತ 31 ದಿನಗಳ ಕಾಲ  ಏರ್ಪಡಿಸಲಾಗಿದ್ದ ರಾಮಾಯಣ ಪಾರಾಯಣ ಸಮಾಪ್ತಿ

ಶೇರ್ ಮಾಡಿ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಲ್ಯಾಡಿ ಕರಯೋಗಂ ವತಿಯಿಂದ ಕರ್ಕಾಟಕ ಮಾಸಾದ್ಯಂತ 31 ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಮಾಯಣ ಪಾರಾಯಣ ಸಪ್ತಾಹವು ದಿನಾಂಕ 16 -08 -2023 ನೇ ಬುಧವಾರ ಬೆಳಿಗ್ಗೆ 10 ಗಂಟೆಗೆ ನೆಲ್ಯಾಡಿ ಕರಯೋಗಂ ಸಭಾ ಭವನದಲ್ಲಿ ಸಮಾಪ್ತಿಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಕರಯೋಗಂ ಅಧ್ಯಕ್ಷರು ಉನ್ನಿಕೃಷ್ಣನ್ ನಾಯರ್ ,ಬೋರ್ಡ್ ಮೆಂಬರ್ ಶಿವದಾಸನ್ ಪಿಳ್ಳೈ ,ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ತಂಗಮಣಿ ಅಮ್ಮ,ಕಾರ್ಯದರ್ಶಿ ಶ್ರೀಮತಿ ಶ್ರೀಜಾ ವಿನೋದ್ ,ಖಜಾಂಜಿ ಶಕುಂತಲಾ ವಿನೋದ್ ಹಾಗೂ ಮಹಿಳಾ ವಿಭಾಗದ ಇನ್ನಿತರೆ ಸದಸ್ಯರು ಪಾಲ್ಗೊಂಡಿದ್ದಾರೆ .ರಾಮಾಯಣ ಪಾರಾಯಣವನ್ನು ಕರ್ಕಾಟಕ ಮಾಸದಲ್ಲಿ ಆಹಾರ ಪದ್ಧ್ದತಿಯೊಂದಿಗೆ ಆಚರಿಸುವುದರಿಂದ ಒಂದು ವರ್ಷಕ್ಕೆ ಬೇಕಾದ ಚೈತನ್ಯ ವೃದ್ಧಿಯಾಗಿ ಜೀವನದಲ್ಲಿ ಆನಂದವನ್ನು ಪಡೆಯಲು ರಾಮಾಯಣ ಮಾಸಾಚರಣೆ ನಡೆಸಲಾಗುತ್ತದೆ.

18:36:36🌸ಜಾಹೀರಾತು🌸

Leave a Reply

error: Content is protected !!