ಪುತ್ತೂರು: ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮಂದಿರ, ಪುತ್ತೂರು ಮತ್ತು ಮಹಿಳಾ ಬಿಲ್ಲವ ವೇದಿಕೆ ಪುತ್ತೂರು ಇದರ ವತಿಯಿಂದ ದಿನಾಂಕ 25/08/2023 ರ ಶ್ರಾವಣ ಶುಕ್ರವಾರದಂದು ಬಿಲ್ಲವ ವೇದಿಕೆ ಪುತ್ತೂರಿನಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯು ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಕಾರ್ಯಕ್ರಮ. ವೃತಾಚರಣೆ ಮಾಡಿದ ಎಲ್ಲರಿಗೂ ಸೀರೆ, ಹಸಿರು ಬಳೆ, ಕುಂಕುಮ, ದಾರವನ್ನು ಭಕ್ತಿ ಪೂರ್ವಕವಾಗಿ ವಿತರಿಸಲಾಗುವುದು. ಬಳಿಕ 12.00 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮವು ಜರುಗಲಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಮಲಾ ಸುರೇಶ್, ಉದ್ಘಾಟಕರಾಗಿ ಸಂಘದ ಅಧ್ಯಕ್ಷರಾದ ಶ್ರೀಯುತ ಸತೀಶ್ ಕುಮಾರ್ ಕಡೆಂಜೆಯವರು ನೆರವೇರಿಸಲಿರುವರು. ಕಾರ್ಯಕ್ರಮದ ಅತಿಥಿಗಳಾಗಿ ನವೀನ್ ಭಂಡಾರಿ ಮುಖ್ಯಕಾರ್ಯ ನಿರ್ವಹಣಾ ಅಧಿಕಾರಿ ಪುತ್ತೂರು, ಶ್ರೀಮತಿ ತನುಜಾ B.R.C ಪುತ್ತೂರು, ನಿವೇದಿತಾ ದಡ್ದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಉಪ್ಪಿನಂಗಡಿ, ಡಾ| ಚಾಂದಿನಿ ಸಹ ಶಿಕ್ಷಕರು ಡಾ|ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಪುತ್ತೂರು, ನಗರ ಕಾರ್ಯಕ್ರಮದಲ್ಲಿ ಭಾಗಹಿಸಲಿದ್ದಾರೆ. ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಮದ್ಯಾಹ್ನ 2.00 ಗಂಟೆಗೆ ಸರಿಯಾಗಿ ಶ್ರಾವಣ ಸಂಭ್ರಮ ಕಾರ್ಯಕ್ರಮ ಜರುಗಲಿದೆ. ಸಂಭ್ರಮದ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ವೈವಿಧ್ಯಮಯ ಕುಣಿತ(ನೃತ್ಯ) ಭಜನಾ ಸ್ಪರ್ಧೆ ನಡೆಯಲಿರುವುದು. ಕುಣಿತಾ ಭಜನೆಗೆ ಹೆಸರನ್ನು ನೋಂದಾಯಿಸುವವರು ದಿನಾಂಕ 22/08/2023 ರೊಳಗೆ ಹೆಸರನ್ನು ನೊಂದಾಯಿಸಿಕೊಳ್ಳುವುದು. ಜಾತಿ, ಭೇದ, ಮತ ಭಾವನೆಗಳ ಯಾವುದೇ ವ್ಯಾಪ್ತಿ ಇಲ್ಲದೇ ಎಲ್ಲರೂ ತಂಡದಲ್ಲಿ ಭಾಗಿಗಳಾಗಬಹುದು. ತಂಡದ ಸದಸ್ಯರ ಮಿತಿ ಇರುವುದಿಲ್ಲ, 10 ನಿಮಿಷಗಳ ಕಾಲಾವಕಾಶ ಇದ್ದು ಭಜನಾ ಪರಿಕರಗಳಾದ ತಬಲ, ತಾಳ, ಕ್ಯಾಸೆಟ್ಗಳನ್ನೂ ಬಳಸಬಹುದು. ಯಾವುದೇ ಪರಿಕರಗಳನ್ನು ಬಳಸಿದರೂ ತಮ್ಮ ನೃತ್ಯ(ಕುಣಿತ) ಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ತಮ್ಮ ಹೆಸರನ್ನು ಬಿಲ್ಲವ ಸಂಘ ಪುತ್ತೂರು ಇಲ್ಲಿ ನೀಡಬಹುದು. ಎಂದು ಮಹಿಳಾ ವೇದಿಕೆ ಅಧ್ಯಕ್ಷರಾದ ವಿಮಲಾ ಸುರೇಶ್ ಹಾಗೂ ಸಂಚಾಲಕರಾದ ಉಷಾ ಅಂಚನ್ ರವರು ಪ್ರಕಟಣೆಯಲ್ಲಿ ತಿಳಿಸಿರುತಾರೆ.