ಕಡಬ : ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು; ಚಿನ್ನ,ಬೆಳ್ಳಿಯ ಆಭರಣ, ಸಿಸಿ ಕ್ಯಾಮರದ ಡಿವಿಆರ್, ಮಾನಿಟರ್ ನೊಂದಿಗೆ ಪರಾರಿ

ಶೇರ್ ಮಾಡಿ

ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಿನ್ನೆ (ಅ.17)ತಡರಾತ್ರಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿಯ ಆಭರಣ ಹಾಗೂ ಸಿ ಸಿ ಕ್ಯಾಮರದ ಪರಿಕರಗಳನ್ನು ಹೊತ್ತೊಯ್ದ ಘಟನೆ ನಡೆದಿದೆ.

ಎಂದಿನಂತೆ ಅ.18ರ ಬೆಳಿಗ್ಗೆ ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಪೂಜೆಗೆಂದು ದೇವಸ್ಥಾನದ ಬಾಗಿಲು ತೆರೆಯಲು ಬಂದಾಗ ದೇವಸ್ಥಾನದ ಮುಖ್ಯ ಬಾಗಿಲನ್ನು ಯಾರೋ ಕಳ್ಳರು ಬಾಗಿಲಿನ ಚಿಲಕವನ್ನು ಹಾನಿ ಮಾಡಿರುವುದು ಕಂಡುಬಂದಿದೆ.

ಪರಿಶೀಲಿಸಿದಾಗ ದೇವರ ಮೂರ್ತಿಗೆ ಹಾಕಲಾದ ಸುಮಾರು ಅಂದಾಜು 35000 ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ದೇವಸ್ಥಾನಕ್ಕೆ ಅಳವಡಿಸಿದ ಅಂದಾಜು ರೂ 36,000/- ಮೌಲ್ಯದ ಸಿ.ಸಿ ಕ್ಯಾಮರದ ಡಿ.ವಿ ಆರ್ ಹಾಗೂ ಟಿ.ವಿ ಮಾನಿಟರ್ ನ್ನು ಕಳ್ಳರು ಕಳವು ಮಾಡಿರುತ್ತಾರೆ.

ಈ ಕುರಿತು ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:73/2023.ಕಲಂ: 457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು, ಸ್ಥಳಕ್ಕೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ.

Leave a Reply

error: Content is protected !!