ದಲಿತ ಹಕ್ಕು ರಕ್ಷಣಾ ಸಮಿತಿಯಿಂದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ

ಶೇರ್ ಮಾಡಿ

ದಲಿತರ ಮೇಲೆ ಪೋಲೀಸ್ ದೌರ್ಜನ್ಯ ಸಂವಿಧಾನದ ಸಾಮಾಜಿಕ ನ್ಯಾಯಕ್ಕೆ ಅಪಚಾರ
                                                                                                                 — ಬಿ.ಎಂ.ಭಟ್

ನೇಸರ ಜ:20 : ಶಿಶಿಲದ ಗಿರೀಶ್ ಎಂಬ ಅಂಗವಿಕಲ ದಲಿತನ ಮೇಲೆ ಪೋಲೀಸರ ದೌರ್ಜನ್ಯ,ಸಂವಿಧಾನದ ಸಾಮಾಜಿಕ ನ್ಯಾಯ,ಸಮಾನತಾ ಹಕ್ಕು,ಮಾನವಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಗಿರೀಶರಿಗೆ ಪರಿಹಾರ ಒದಗಿಸಬೇಕಾದ್ದು ಸರಕಾರದ ಕರ್ತವ್ಯ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಹೇಳಿದರು.ಅವರು ಬೆಳ್ತಂಗಡಿ ವಿಧಾನಸೌದ ಎದುರು ದ.ಕ.ಜಿಲ್ಲಾ ದಲಲಿತ ಹಕ್ಕುಗಳ ರಕ್ಷಣಾ ಸಮಿತಿ ನೇತೃತ್ವದಲ್ಲಿ ಶಿಶಿಲದಲ್ಲಿ ನಡೆದ ಪೋಲೀಸ್ ದಲಿತ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು.ದಲಿತರಿಗೆ ಸಂವಿಧಾನ ಬದ್ದ ಹಕ್ಕುಗಳನ್ನು,ಬದುಕನ್ನು ಕೊಡಲಾಗದ ಸರಕಾರಕ್ಕೆ ಕನಿಷ್ಟ ಭೂಮಿಯ ಹಕ್ಕನ್ನೂ ನೀಡದೆ. ಈ ರೀತಿ ದೌರ್ಜನ್ಯಗಳನ್ನು ಬೆಂಬಲಿಸುತ್ತಿದೆ ಎಂದರು.ಪೋಲೀಸರು ಬಡ ದಲಿತನ ಮೇಲೆ ಉತ್ತರನ ಪೌರುಷ ಮೆರೆದಿದ್ದಾರೆ ಎಂದು ಟೀಕಿಸಿದರು.ಹಲ್ಲೆ ನಡೆಸಿದ್ದಲ್ಲದೆ ಸುಳ್ಳು ಕೇಸನ್ನು ದಾಖಲಿಸಿ ಹಿಂಸಿಸಲಾಗಿದೆ.ಲಂಚ ತೆಗೊಳ್ಳವರ ಮೇಲೆ,ಕೊಲೆ ಮಾಡಿದವರನ್ನ,ಕಳ್ಳರನ್ನ,ಅತ್ಯಾಚರಿಗಳನ್ನ ಮುಟ್ಟಲಾಗದ ಪೋಲೀಸರು ಈ ಬಡಪಾಯಿ ಮೇಲೆ ಹಲ್ಲೆ ನಡೆಸಿರುವುದು ಬಿಜೆಪಿ ಸರಕಾರದ ಹಿಡನ್ ಅಜೆಂಡವಾಗಿದೆ ಎಂದರು. ಬಾಬಾ ಸಾಹೇಬರ ಚಿಂತನೆಗೆ ಬದ್ದ ವಿರೋದಿಗಲಾದ ಬಿಜೆಪಿ ಸರಕಾರ ದಲಿತರನ್ನ, ಹಿಂದುಳಿದವರನ್ನ, ಸ್ವಾತಂತ್ರ್ಯ ಹೋರಾಟಗಾರರನ್ನ ಕಂಡರಾಗದವರೆಂದು ರುಜುವಾತು ಮಾಡಿದ್ದಾರೆ ಎಂದರು.ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ವಿರೋದ,ಸುಭಾಸ್ಚಂದ್ರ ಬೋಸರ ಸ್ತಬ್ದ ಚಿತ್ರಕ್ಕೆ ವಿರೋದ ಮಾಡಿದ ಬಿಜೆಪಿ.ಸರಕಾರ ದಲಿತರು ನೆಮ್ಮದಿಯಿಂದ ಸ್ವತಂತ್ರವಾಗಿ ಬದುಕುವುದನ್ನ ಕೂಡಾ ಸಹಿಸುವುದಿಲ್ಲ ಎಂಬುದು ಕುಂದಾಪುರದ ಕೊರಗರ ಮೇಲಿನ ದಾಳಿ, ಶಿಶಿಲ ದಲಿತರ ಮೇಲಿನ ದಾಳಿ,ಬೆಳ್ಲಾರೆಯ ಬೆತ್ತಲೆ ಮಾಡಿ ಹಲ್ಲೆ ಪ್ರಕರಣಗಳಿಂದ ರುಜುವಾತು ಮಾಡಿದೆ ಎಂದರು.
ಮೊದಲು ಪ್ರಾಸ್ತಾವಿಕವಾಗಿ ಮಾತಾಡಿದ ದಲಿತ ಹಕ್ಕು ರಕ್ಷಣಾ ಸಮಿತಿಯ ಕಾರ್ಯದರ್ಶಿ ಈಶ್ವರಿ ಮಾತಾಡುತ್ತಾ ಘಟನೆಯನ್ನು ವಿವರಿಸಿ ಸಾಮಾಜಿಕ ನ್ಯಾಯ ಬಿಕ್ಷೆ ಅಲ್ಲ ಅದು ನಮ್ಮ ಹಕ್ಕು,ಸಂವಿದಾನ ಬದ್ದವಾಗಿ ಬದುಕಲು ಬಿಡದ ಪೋಲಿಸರು ಅದಿಕಾರದಲ್ಲಿ ಮುಂದುವರಿಯಲು ಅಯೋಗ್ಯರು ಎಂದರು. ಇಂತಹ ಗೂಂಡಾಗಳನ್ನು ತಕ್ಷಣ ಪೋಲೀಸ್ ಕೆಲಸದಿಂದ ವಜಾಗೊಳಿಸಬೇಕು ಹಾಗೂ ಸುಳ್ಳು ಕೇಸು ದಾಖಲಿಸಿ ದೌರ್ಜನ್ಯ ಎಸಗಿದ ಠಾಣೆಯ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗಿರಿಶರಿಗೆ ಹಲ್ಲೆ ಕೋರ ಪೋಲೀಸರುಗಳಿಂದ ಪರಿಹಾರ ಒದಗಿಸಬೇಕು ಎಂದರು.

ಸಿಐಟಿಯು ತಾಲೂಕು ಅದ್ಯಕ್ಷರಾದ ಎಲ್.ಮಂಜುನಾಥ್ ಸ್ವಾಗತಿಸಿದರು.ಜಯಂತ ಪಟ್ರಮೆ ವಂದಿಸಿದರು.ಹೋರಾಟದ ನೇತೃತ್ವದಲ್ಲಿ ಸಂಘಟನೆಯ ಅಧ್ಯಕ್ಷ ಬಾಬು ಕೊಯ್ಯೂರು,ಸಿಪಿಐ(ಎಂ) ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ,ಪುಷ್ಪಾ, ಸಂಜೀವ ನಾಯ್ಕ,ಹಲ್ಲೆಗೊಳಗಾದ ಗಿರೀಶ್,ಆಶಾ,ಗೋಪಾಲ,ಚೋಮ,ಕವಿತ, ಶ್ರೀಧರ. ಮೊದಲಾದವರಿದ್ದರು

Leave a Reply

error: Content is protected !!