ಕಡಬ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟವು ಆ.22 ಮಂಗಳವಾರ ದಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ, ರಾಮ ಕುಂಜದಲ್ಲಿ ಜರಗಿತು. ಇದರಲ್ಲಿ ಬಾಲಕಿಯರ ವಿಭಾಗದಲ್ಲಿ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ತಂಡವು ವಿದ್ಯಾರ್ಥಿನಿಯರಾದ ರಿಧ್ದಿ ಶೆಟ್ಟಿ(10ನೆಯ ತರಗತಿ), ಲಯಶ್ರೀ (10ನೆಯ ತರಗತಿ), ತ್ರಿಷಾ ರೈ(10ನೆಯ ತರಗತಿ), ನಿಶ್ಮಾ(10ನೆಯ ತರಗತಿ) ರಕ್ಷಾ ಜೆ ರೈ(10ನೆಯ ತರಗತಿ), ದೀಕ್ಷಿತ ಎಸ್ ಎಂ( 10ನೆಯ ತರಗತಿ), ಶ್ರೇಯ(10 ನೆಯ ತರಗತಿ), ಯಾನ್ವಿತಾ ಎಂ ಕೆ(9ನೆಯ ತರಗತಿ) ಅವರನ್ನು ಒಳಗೊಂಡಿದೆ. ರಿಧ್ಧಿ ಶೆಟ್ಟಿ ಅವರು ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ಇವರೆಲ್ಲರು ಸೆಪ್ಟೆಂಬರ್ 7ರಂದು ಸೈಂಟ್ ಮೇರಿಸ್ ಪ್ರೌಢಶಾಲೆ ಮರ್ದಾಳ ಇಲ್ಲಿ ಜರಗಲಿರುವ ಪುತ್ತೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.