Aditya L1:ಸೂರ್ಯನ ಅಧ್ಯಯನ-ಭೂಮಿಗೆ ಎರಡನೇ ಸುತ್ತನ್ನು ಯಶಸ್ವಿಯಾಗಿ ಪೂರೈಸಿದ ಆದಿತ್ಯ ಎಲ್‌ 1

ಶೇರ್ ಮಾಡಿ

ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಭಾರತದ ಆದಿತ್ಯ ಎಲ್‌ 1 ಭೂಮಿಯ ಸುತ್ತ ಎರಡನೇ ಸುತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಮಂಗಳವಾರ (ಸೆಪ್ಟೆಂಬರ್‌ 05) ಇಸ್ರೋ ತಿಳಿಸಿದೆ.

ಮಂಗಳವಾರ ನಸುಕಿನ ವೇಳೆ ಸೂರ್ಯಯಾನದ ಆದಿತ್ಯ ಎಲ್‌ 1 ಉಪಗ್ರಹ ಭೂಮಿಯನ್ನು ಎರಡನೇ ಬಾರಿ ಯಶಸ್ವಿಯಾಗಿ ಸುತ್ತುಹಾಕಿರುವುದಾಗಿ ಹೇಳಿದೆ.

ಇಸ್ರೋದ ಮಾರಿಷಸ್‌ ನ ಗ್ರೌಂಡ್‌ ಸ್ಟೇಶನ್‌, ಬೆಂಗಳೂರು ಮತ್ತು ಪೋರ್ಟ್‌ ಬ್ಲೇರ್‌ ಜಂಟಿಯಾಗಿ ಸೆಟಲೈಟ್‌ ಕಾರ್ಯಾಚರಣೆ ಕುರಿತು ನಿಗಾ ವಹಿಸಿದ್ದು, ಮಾಹಿತಿ ಕಲೆ ಹಾಕಿರುವುದಾಗಿ ಇಸ್ರೋ ವಿವರಿಸಿದೆ.

ಈಗಾಗಲೇ ಭೂಮಿಗೆ ಎರಡನೇ ಸುತ್ತನ್ನು ಪೂರೈಸಿರುವ ಆದಿತ್ಯ ಎಲ್‌ 1 ಅನ್ನು ಸೆಪ್ಟೆಂಬರ್‌ 10ರ ರಾತ್ರಿ 2.30ಕ್ಕೆ ಮೂರನೇ ಕಕ್ಷೆಗೆ ಏರಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಪ್ರಸ್ತುತ ಆದಿತ್ಯ ಎಲ್‌ 1 282 ಕಿಮೀ X 40225 ಕಿಲೋ ಮೀಟರ್‌ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ.

ಭಾರತದ ಮೊದಲ ಆದಿತ್ಯ ಎಲ್‌ 1 ಸೆಟಲೈಟ್‌ ಅನ್ನು ಸೆಪ್ಟೆಂಬರ್‌ 2ರಂದು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ಸೆಂಟರ್‌ ಕಕ್ಷೆ ಬದಲಾವಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

Leave a Reply

error: Content is protected !!