ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಭಾರತದ ಆದಿತ್ಯ ಎಲ್ 1 ಭೂಮಿಯ ಸುತ್ತ ಎರಡನೇ ಸುತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಮಂಗಳವಾರ (ಸೆಪ್ಟೆಂಬರ್ 05) ಇಸ್ರೋ ತಿಳಿಸಿದೆ.
ಮಂಗಳವಾರ ನಸುಕಿನ ವೇಳೆ ಸೂರ್ಯಯಾನದ ಆದಿತ್ಯ ಎಲ್ 1 ಉಪಗ್ರಹ ಭೂಮಿಯನ್ನು ಎರಡನೇ ಬಾರಿ ಯಶಸ್ವಿಯಾಗಿ ಸುತ್ತುಹಾಕಿರುವುದಾಗಿ ಹೇಳಿದೆ.
ಇಸ್ರೋದ ಮಾರಿಷಸ್ ನ ಗ್ರೌಂಡ್ ಸ್ಟೇಶನ್, ಬೆಂಗಳೂರು ಮತ್ತು ಪೋರ್ಟ್ ಬ್ಲೇರ್ ಜಂಟಿಯಾಗಿ ಸೆಟಲೈಟ್ ಕಾರ್ಯಾಚರಣೆ ಕುರಿತು ನಿಗಾ ವಹಿಸಿದ್ದು, ಮಾಹಿತಿ ಕಲೆ ಹಾಕಿರುವುದಾಗಿ ಇಸ್ರೋ ವಿವರಿಸಿದೆ.
ಈಗಾಗಲೇ ಭೂಮಿಗೆ ಎರಡನೇ ಸುತ್ತನ್ನು ಪೂರೈಸಿರುವ ಆದಿತ್ಯ ಎಲ್ 1 ಅನ್ನು ಸೆಪ್ಟೆಂಬರ್ 10ರ ರಾತ್ರಿ 2.30ಕ್ಕೆ ಮೂರನೇ ಕಕ್ಷೆಗೆ ಏರಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಪ್ರಸ್ತುತ ಆದಿತ್ಯ ಎಲ್ 1 282 ಕಿಮೀ X 40225 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ.
ಭಾರತದ ಮೊದಲ ಆದಿತ್ಯ ಎಲ್ 1 ಸೆಟಲೈಟ್ ಅನ್ನು ಸೆಪ್ಟೆಂಬರ್ 2ರಂದು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ಸೆಂಟರ್ ಕಕ್ಷೆ ಬದಲಾವಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ.
Aditya-L1 Mission:
— ISRO (@isro) September 4, 2023
The second Earth-bound maneuvre (EBN#2) is performed successfully from ISTRAC, Bengaluru.
ISTRAC/ISRO's ground stations at Mauritius, Bengaluru and Port Blair tracked the satellite during this operation.
The new orbit attained is 282 km x 40225 km.
The next… pic.twitter.com/GFdqlbNmWg