ನೆಲ್ಯಾಡಿ ಜೇಸಿಐ ಸಮಾರೋಪ ಸಮಾರಂಭವು ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಸೆ.16ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಜೇಸಿ ದಯಾಕರ ರೈ ಕೆ.ಯಂ ರವರು ವಹಿಸಿ ಸ್ವಾಗತಿಸಿದರು. ಜೇಸಿಐ ವಲಯ ಉಪಾಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ರವರು ದೀಪ ಪ್ರಜ್ವಲನೆಯ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ಜೇಸಿ ಸಂಸ್ಥೆಯು ಒಂದು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಹಲವಾರು ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಜೇಸಿ ವಲಯದ ಕಾರ್ಯಕ್ರಮ ನಿರ್ದೇಶಕರಾಗಿರುವ ಶ್ರೀಮತಿ ಅಕ್ಷತಾ ಗಿರೀಶ್ ಮಾತನಾಡಿ ಈ ಘಟಕವು ಹಲವಾರು ರೀತಿಯ ತರಬೇತಿ ಕಾರ್ಯಕ್ರಮ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ವಲಯದಲ್ಲಿ ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು ಏಳು ದಿನಗಳ ಕಾರ್ಯಕ್ರಮಗಳು ಹಲವು ವೈಶಿಷ್ಟತೆಗಳಿಂದ ಮೂಡಿಬಂದು ವಲಯದಲ್ಲಿಯೇ ಈ ಘಟಕ ಗುರುತಿಸಿ ಕೊಂಡಿದೆ ಎಂದರು.
ಮುಖ್ಯ ಅತಿಥಿ ವಿದ್ಯಾಮಾತಾ ಅಕಾಡೆಮಿ ಸ್ಥಾಪಕ ಭಾಗ್ಯೇಶ್ ರೈ ರವರನ್ನು ಸನ್ಮಾನಿಸಲಾಯಿತು. ನೆಲ್ಯಾಡಿಯ ಉದ್ಯಮಿ ಸತೀಶ್ ಕೆ.ಎಸ್, ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಮತ್ತು ಜೇಸಿಐ ಘಟಕದ ಪೂರ್ವ ಅಧ್ಯಕ್ಷರಾದ ಜೇಸಿ ಅಬ್ರಹಾಂ ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಲಯದ ಪಂಚಶ್ರೀ ಪ್ರಶಸ್ತಿಗಳಲ್ಲಿ ಒಂದಾದ ಉದ್ಯೋಗ ರತ್ನ ಪ್ರಶಸ್ತಿಯನ್ನು ಪಡೆದಿರುವ ಘಟಕದ ಪೂರ್ವ ಅಧ್ಯಕ್ಷ ಜೇಸಿ ಜಾನ್ ಪಿ.ಎಸ್ ರವರನ್ನು ಮತ್ತು ಆರ್ಯಭಟ ಪ್ರಶಸ್ತಿ ಪಡೆದಿರುವ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಉಪನ್ಯಾಸಕರಾಗಿರುವ ಜೇಸಿ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಘಟಕದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಕಮಲ ಪತ್ರ ಪ್ರಶಸ್ತಿಯನ್ನು ಜೇಸಿ ಜಯಾನಂದ ಬಂಟ್ರಿಯಾಲ್ ರವರಿಗೆ ನೀಡಿ ಗೌರವಿಸಲಾಯಿತು.
ಅತಿಥಿಗಳ ಪರಿಚಯವನ್ನು ಜೇಸಿ ಪೂರ್ವ ಅಧ್ಯಕ್ಷರಾಗಿರುವ ದಯಾನಂದ ಆದರ್ಶ, ಜೇ ಎಮ್ಎಫ್ ರವಿಚಂದ್ರ ಹೊಸವಕ್ಲು, ಜೇಸಿ ಎಚ್.ಜಿ.ಎಫ್ ಪುರಂದರ ಗೌಡ, ಜೇಸಿ ನಾರಾಯಣ ಎನ್ ಬಲ್ಯ, ಜೇಸಿ ಎಚ್.ಜಿ.ಎಫ್ ಶಿವಪ್ರಸಾದ್, ಜೇಸಿ ಎಚ್.ಜಿ.ಎಫ್ ಜಯಾನಂದ ಬಂಟ್ರಿಯಾಲ್, ಜೇಸಿ ರಶ್ಮಾ ದಯಾಕರ್ ಮಾಡಿದರು.
ನಿರ್ದೇಶಕರಾದ ಜೇಸಿ ವಿನ್ಯಾಸ್ ರವರು ವರದಿ ವಾಚಿಸಿದರು, ಜೇಸಿ ವಾಣಿಯನ್ನು ಜೇಸಿ ಸುಪ್ರೀತಾ ರವಿಚಂದ್ರ ವಾಚಿಸಿದರು. ಕಾರ್ಯದರ್ಶಿ ಜೇಸಿ ಸುಚಿತ್ರಾ ಬಂಟ್ರಿಯಾಲ್ ರವರು ವಂದಿಸಿದರು.