ಚೈತ್ರಾ ಕುಂದಾಪುರ ಕಾರು ಬಾಗಲಕೋಟೆಯಲ್ಲಿ ಪತ್ತೆ, ಯಾರ ಮನೆಯಲ್ಲಿ ಗೊತ್ತಾ? ಇಲ್ಲಿವೆ ಫೋಟೋಸ್

ಶೇರ್ ಮಾಡಿ

ಉದ್ಯಮಿ ಗೋವಿಂದ್ ಬಾಬು ಎನ್ನುವರಿಗೆ ಕೋಟ್ಯಂತರ ರೂಪಾಯಿ ಪಡೆದುಕೊಂಡು ಚೈತ್ರಾ ಕುಂದಾಪುರ ಸೇರಿದಂತೆ ಆಕೆಯ ಗ್ಯಾಂಗ್​ ವಂಚನೆ ಮಾಡಿದೆ. ಉದ್ಯಮಿಯಿಂದ ಕಿತ್ತುಕೊಂಡ ಕೋಟ್ಯಾಂತರ ರೂಪಾಯಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೈಫೈ ಜೀವನ ಆರಂಭಿಸಿದ್ದಾರೆ. ಅಲ್ಲದೇ ಅದೇ ದುಡ್ಡಿನಲ್ಲಿ ಚೈತ್ರಾ ಕಿಯಾ ಕಂಪನಿಯ ಕಾರು ಖರೀದಿಸಿದ್ದು, ಇದೀಗ ಆ ಕಾರು ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.

ಉದ್ಯಮಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ 5 ಕೋಟಿ ಹಣ ಪಡೆದು ವಂಚನೆ ಕೇಸ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಕಾರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆಯಾಗಿದೆ.

ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳ ಮನೆಯಲ್ಲಿ ಚೈತ್ರಾ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದೆ.

ಚೈತ್ರಾ ಕುಂದಾಪುರಗೆ ಸೇರಿದ KA 20 ME 7253 ನಂಬರ್​ನ ಕಿಯಾ ಕಾರನ್ನು ಕಿರಣ್, ಸೆಪ್ಟೆಂಬರ್ 9ರಂದು ತಂದು ತನ್ನ ಬಳಿ ಇಟ್ಟುಕೊಂಡಿದ್ದ. ಮುಧೋಳ‌ದಲ್ಲಿ ಡ್ರೈವಿಂಗ್ ಸ್ಕೂಲ್‌ ಹೊಂದಿರುವ ಕಿರಣ್ ಗಣಪ್ಪಗೋಳ, ಈ ಹಿಂದೆ ಮುಧೋಳ ಕಾರ್ಯಕ್ರಮಕ್ಕೆ ಬಂದಿದ್ದ ಚೈತ್ರಾ ಕುಂದಾಪುರ ಪರಿಚಯವಾಗಿತ್ತು.

ಸದ್ಯ ಸಿಸಿಬಿ ಪೊಲೀಸರು ಚೈದ್ರಾ ಕುಂದಾಪುರಗೆ ಸೇರಿದ KA 20 ME 7253 ನಂಬರ್​ನ ಕಿಯಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈದ್ರಾ ಕುಂದಾಪುರಗೆ ಸೇರಿದ ಕಾರು ತಂದು ಇಟ್ಟುಕೊಂಡಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳನನ್ನು ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಚೈತ್ರಾ ಕುಂದಾಪುರಗೆ ಸೇರಿದ ಕೋಟ್ಯಂತರ ರೂಪಾಯಿ ನಗದು ಹಣ, ಚಿನ್ನಾಭರಣಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಕಾರನ್ನು ಸಹ ತಮ್ಮ ಸುಪರ್ಧಿಗೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

Leave a Reply

error: Content is protected !!