ಪ್ರೀತಿಸಿ ಮದುವೆಯಾದ ನಂತರ ವಂಚಿಸಿ ಪರಾರಿಯಾದ ಮಹಿಳೆ, ಠಾಣೆ ಮೆಟ್ಟಿಲೇರಿದ ಪತಿ

ಶೇರ್ ಮಾಡಿ

ಮಹಿಳೆಯೊಬ್ಬಳು ಫೇಸ್​ಬುಕ್​ನಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆಯಾದ ನಂತರ ವಂಚನೆ ಎಸಗಿದ ಪ್ರಕರಣ ಬೆಂಗಳೂರಿನಲ್ಲಿ ನಡೆದೆ. ಮೊದಲ ಮದುವೆ ಮುಚ್ಚಿಟ್ಟು ವಂಚನೆ ಎಸಗಲೆಂದೇ ಆಕೆಯ ಸಂಬಂಧಿಕರು ತನ್ನೊಂದಿಗೆ ಮದುವೆ ಮಾಡಿದ್ದಾಗಿ ಆರೋಪಿಸಿ ಪತಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೇಸ್ ಬುಕ್​ನಲ್ಲಿ ಮಹಿಳೆ ಪರಿಚಯ ಮಾಡಿಕೊಂಡಿದ್ದ ಸಂತೋಷ್, 2018 ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲೇ ಆಕೆಗೆ ಕೆಲಸ ಕೊಡಿಸಿದ್ದ. ಇದೇ ಪರಿಚಯದ ಮೇಲೆ ಸಂತೋಷ್ ಮತ್ತು ಮಹಿಳೆ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಮದುವೆಯಾಗಲೂ ನಿರ್ಧರಿಸಿದ್ದಾರೆ. ಅದರಂತೆ ಮದುವೆ ಮಾಡಿಸಲು ಮಹಿಳೆಯ ಅಕ್ಕ-ಭಾವ ಮುಂದೆ ಬಂದಿದ್ದಾರೆ.

ಮದುವೆ ಮಾಡಿಸಲು ಚಿನ್ನದ ಆಭರಣ ಮಾಡಿಸುವಂತೆ ಮಹಿಳೆಯ ಅಕ್ಕ ಸಂತೋಷ್​ಗೆ ಹೇಳಿದ್ದಲ್ಲದೆ, ಮದುವೆಗೆ ಮುಂಚೆ ಐಫೋನ್ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾಳೆ. ಹೀಗಾಗಿ ಸಂತೋಷ್ 2.60 ಲಕ್ಷ ಮೌಲ್ಯದ ಎರಡು ಐಫೋನ್‌ ಕೊಡಿಸಿದ್ದಾರೆ.

ಹಣ, ಆಭರಣ, ಮೊಬೈಲ್ ಫೋನ್ ಕೊಡಿಸುವುದರ ಜೊತೆಗೆ ಮದುವೆ ತಯಾರಿ ಕೂಡ ಶುರುವಾಗಿ 2022 ರಂದು ನವೆಂಬರ್ ತಿಂಗಳಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಮದುವೆಯೂ ನಡೆಯಿತು. ಆದರೆ ಈ ದಂಪತಿ ನಡುವೆ ನಡೆದ ದಾಂಪತ್ಯ ಜೀವನ ಕೇಲವ ಮೂರೇ ತಿಂಗಳು ಮಾತ್ರ. ಮದುವೆಗೂ ಮುನ್ನ ಸಂತೋಷ್​ ಬಳಿಯಿಂದ ಚಿನ್ನಾಭರಣ, ಮೊಬೈಲ್​ ಫೋನ್ ಪಡೆದಿರುವುದು ಸೇರಿದಂತೆ ಲಕ್ಷಾಂತರ ರೂಪಾಯಿ ವಂಚಿಸಿ ಮನೆ ಬಿಟ್ಟು ಹೋಗಿದ್ದಾಳೆ.

ಮದುವೆಯಾದರೂ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡಿಲ್ಲ. ಆಕೆಗೆ ಮೊದಲು ಒಂದು ಮದುವೆಯಾಗಿದ್ದು, ಇದನ್ನು ಮುಚ್ಚಿಟ್ಟು ತನ್ನೊಂದಿಗೆ ಮದುವೆ ಮಾಡಿಸಿದ್ದಾರೆ. ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿದ್ದಾರೆ. ಎಂದು ಆರೋಪಿಸಿ ಮಹಿಳೆ ಮತ್ತು ಆಕೆಯ ಅಕ್ಕ-ಭಾವನ ವಿರುದ್ಧ ಸಂತೋಷ್ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಮೂವರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

error: Content is protected !!