ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

ಶೇರ್ ಮಾಡಿ

ಕೋಟಿ ಕೋಟಿ ವಂಚನೆ ಪ್ರಕರಣದ ಚೈತ್ರಾ ವಂಚನೆಯ ಕೂಟದಲ್ಲಿದ್ದ ಎ3 ಆರೋಪಿ ಹಾಲಶ್ರೀ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಹಾಲಶ್ರೀ ಬಂಧನಕ್ಕೆ ಮಡಿತೊಟ್ಟು ಅಖಾಡಕ್ಕೆ ಇಳಿದಿದ್ದ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಲು ರೋಚಕವಾಗಿದೆ.

ಎಂಟು ದಿನಗಳಿಂದ ಮೊಬೈಲ್ ಸ್ವಿಚ್ಡ್ ಆಫ್ ಮಾಡ್ಕೊಂಡು ತಲೆಮರೆಸಿಕೊಂಡಿದ್ದ ಹಾಲಶ್ರೀ ಹೈದರಾಬಾದ್ ಕಡೆಯಿಂದ ಉತ್ತರ ಭಾರತದ ಕಡೆ ಹೋಗಿರೋ ಮಾಹಿತಿ ಸಿಕ್ಕಿತ್ತು. ಹಾಲಶ್ರೀ ಮಠಗಳು, ದೇವಸ್ಥಾನಗಳಲ್ಲಿ ಇರಬಹುದೆಂಬ ಮಾಹಿತಿ ಆಧಾರದಲ್ಲಿ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿದ್ರು. ಶೃಂಗೇರಿ ದೇವಸ್ಥಾನದ ಅರ್ಚಕರ ರೀತಿ ಮಡಿಬಟ್ಟೆ ಧರಿಸಿ ಫೀಲ್ಡ್ ಗೆ ಇಳಿದಿದ್ರು.

ನಾಲ್ವರು ಅರ್ಚಕರ ವೇಷದಲ್ಲಿ ಪ್ರತಿಯೊಂದು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸೋ ನಾಟಕವಾಡಿದ್ರು. ಒಂದೊಂದೇ ಮಠ, ದೇವಸ್ಥಾನ ಮುಗಿಸಿ ಒಡಿಶಾದ ಪೂರಿ ಜಗನ್ನಾಥ್ ದೇವಸ್ಥಾನಕ್ಕೆ ಪೊಲೀಸರು ಹೋಗಿದ್ದರು. ಈ ವೇಳೆ ಪೂರಿ ಜಗನ್ನಾಥ್ ದೇವಸ್ಥಾನದಲ್ಲಿ ಹಾಲಶ್ರೀ ಇರೋದು ಪತ್ತೆಯಾಗಿತ್ತು. ನಾವು ಶೃಂಗೇರಿಯಿಂದ ಬಂದಿದ್ದೀವಿ, ಗಣೇಶ ಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಬೇಕು ಅಂತ ಹೇಳಿದ್ರು.

ಈ ಮಾತನ್ನು ಕೇಳಿಸಿಕೊಂಡ ಹಾಲಶ್ರೀ ತಕ್ಷಣ ದೇವಸ್ಥಾನ ತೊರೆದು ಒಡಿಸ್ಸಾದ ಭುವನೇಶ್ವರದಿಂದ ಬಿಹಾರದ ಭೋದ್ಗಯ್‍ಗೆ ರೈಲು ಟಿಕೆಟ್ ಬುಕ್ ಮಾಡಿದ್ರು. ಭುವನೇಶ್ವರ ರೈಲ್ವೆ ನಿಲ್ದಾಣಕ್ಕೆ ಪೊಲೀಸರು ಬರಬಹುದು ಅಂತಾ ಶಂಕಿಸಿ ಅಲ್ಲಿಂದ 25 ಕಿ.ಮೀ. ಇರುವ ಕಟಕ್ ರೈಲ್ವೆ ನಿಲ್ದಾಣಕ್ಕೆ ಬಸ್‍ನಲ್ಲಿ ಪಯಾಣಿಸಿದ್ರು. ಅಷ್ಟೊತ್ತಿಗೆ ಕಟಕ್ ರೈಲ್ವೆ ನಿಲ್ದಾಣದ ಪೊಲೀಸರಿಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ರು. ಕಟಕ್ ರೈಲ್ವೆ ನಿಲ್ದಾಣಕ್ಕೆ ಹಾಲಶ್ರೀ ಬರ್ತಿದ್ದಂತೆ ಒಡಿಸ್ಸಾ ಪೊಲೀಸರು ಬಂಧಿಸಿದ್ರು.

ಉದ್ಯಮಿಗೆ ಕೋಟಿ ಕೋಟಿ ವಂಚನೆ ಕೇಸ್‍ನಲ್ಲಿ ಎ-3 ಹಾಲಶ್ರೀಯ ಬಂಧನವಾಗಿದೆ. ಈಗ ಇರೋದು ಒಂದೇ ಕುತೂಹಲ. ಅಂದು ಚೈತ್ರಾ ಸ್ವಾಮೀಜಿ ಅರೆಸ್ಟ್ ಬಳಿಕ ದೊಡ್ಡವರ ಹೆಸರು ಹೊರಗೆ ಬರುತ್ತೆ ಅಂತ ಹೇಳಿದ್ದಳು. ಇದೀಗ ಸಿಸಿಬಿ ಪೊಲೀಸ್ರು ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್ ಮಾಡಿದ್ದಾರೆ. ಇಂದು ಸ್ವಾಮೀಜಿಯನ್ನ ಕಸ್ಟಡಿಗೆ ಪಡೆದು ಅಧಿಕೃತವಾಗಿ ವಿಚಾರಣೆ ಆರಂಭಿಸಲಿದ್ದಾರೆ.

Leave a Reply

error: Content is protected !!