ಪ್ರಧಾನಿ ನರೇಂದ್ರ ಮೋದಿಯವರ ಸೂಪರ್ ಸೇಫ್ ಗಾರ್ಡ್ ಐಷಾರಾಮಿ ಕಾರಿನ ವಿಶೇಷತೆಗಳೇನು ಗೊತ್ತಾ?

ಶೇರ್ ಮಾಡಿ

ನರೇಂದ್ರ ಮೋದಿಯವರು(Narendra Modi) ಮುಖ್ಯಮಂತ್ರಿಯಾಗಿದ್ದಾಗ ಮಹೀಂದ್ರಾ ನಿರ್ಮಾಣದ ಸ್ಕಾರ್ಪಿಯೋದಿಂದ ಹಿಡಿದು ಪ್ರಧಾನ ಮಂತ್ರಿ ಸ್ಥಾನಕ್ಕೇರುವ ತನಕ ಹಲವಾರು ಕಾರು ಮಾದರಿಗಳನ್ನು ತಮ್ಮ ಅಧಿಕೃತ ವಾಹನವಾಗಿ ಬಳಕೆ ಮಾಡಿದ್ದು, ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಹೆಚ್ಚಿನ ಭದ್ರತೆ ಹೊಂದಿರುವ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಭದ್ರತಾ ಸಂಸ್ಥೆಗಳ ಸಲಹೆ ಮೇರೆಗೆ ವೈಯಕ್ತಿಕರಣಗೊಳಿಸಿದ ಕಾರುಗಳನ್ನು ಮಾತ್ರ ಪ್ರಧಾನಿ ಮೋದಿಯವರ ಪ್ರಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದ್ದು, ಇವು ಅತ್ಯುನ್ನತ್ತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ಭದ್ರತಾ ದೃಷ್ಟಿಯಿಂದ ಪ್ರಧಾನಿಯವರ ಕಾರಿನ ಕೆಲವು ಸುರಕ್ಷಾ ವೈಶಿಷ್ಟ್ಯತೆಗಳನ್ನು ಗೌಪ್ಯವಾಗಿಡಲಾಗಿದ್ದು, ವೈಯಕ್ತಿಕ ಭದ್ರತಾ ವಿಭಾಗವು ನಿಗದಿಪಡಿಸಿದ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಕಾರುಗಳು ಮಾತ್ರ ಪ್ರಧಾನಿಯವರ ಪ್ರಯಾಣಕ್ಕೆ ಅರ್ಹವಾಗಿರುತ್ತವೆ.

ಮರ್ಸಿಡಿಸ್ ಮೇಬ್ಯಾಕ್ ಎಸ್ 650 ವಿಶೇಷ ಸಂದರ್ಭಗಳಲ್ಲಿ ಹಲವಾರು ಹೊಸ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಮರ್ಸಿಡಿಸ್ ಮೇಬ್ಯಾಕ್ ಎಸ್ 650 ಕಾರಿನಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದು, ಇದು ಈ ಹಿಂದಿನ ಕಾರು ಮಾದರಿಗಿಂತಲೂ ಹೆಚ್ಚಿನ ಭದ್ರತೆಯೊಂದಿಗೆ ಅರಾಮದಾಯಕವಾದ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಹೊಸ ಮರ್ಸಿಡಿಸ್ ಮೇಬ್ಯಾಚ್ ಎಸ್650 ಕಾರು ಅಲ್ಟ್ರಾ ಲಗ್ಷುರಿ ಸೆಡಾನ್ ಕಾರು ಮಾದರಿಯಾಗಿದ್ದು, ಇದು ಭಾರತದಲ್ಲಿ ಸಾಮಾನ್ಯ ಫೀಚರ್ಸ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.12 ಕೋಟಿ ಬೆಲೆ ಹೊಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಗಾಗಿ ಒದಗಿಸಲಾಗಿರುವ ಮರ್ಸಿಡಿಸ್ ಮೇಬ್ಯಾಚ್ ಎಸ್650 ಕಾರು ಮಾದರಿಯು ಇನ್ನು ಕೆಲವು ಆತಂರಿಕ ಭದ್ರತಾ ವೈಶಿಷ್ಟ್ಯತೆಗಳೊಂದಿಗೆ ಮತ್ತಷ್ಟು ದುಬಾರಿ ಬೆಲೆ ಹೊಂದಿದ್ದು, ಯಾವುದೇ ಮಾದರಿಯ ದಾಳಿಗಳನ್ನು ಇವು ಸಮರ್ಥವಾಗಿ ಎದುರಿಸಬಲ್ಲವು.

ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್650 ಕಾರು ಮಾದರಿಯು ಸಂಪೂರ್ಣವಾಗಿ ಬುಲೆಟ್‌ ಪ್ರೂಫ್‌ ವೈಶಿಷ್ಟ್ಯತೆ ಹೊಂದಿದ್ದು, ಉತ್ಕೃಷ್ಟ ಗುಣಮಟ್ಟದ ಬಾಡಿಯೊಂದಿಗೆ ಬುಲೆಟ್‌ಗಳನ್ನು ಎದುರಿಸುವಷ್ಟು ಸಾಮರ್ಥ್ಯವನ್ನು ಈ ಕಾರು ಹೊಂದಿದೆ. ಈ ಮೂಲಕ ಪ್ರಬಲವಾದ ಬಾಂಬ್ ಸ್ಪೋಟಗಳನ್ನು ಎದರಿಸುವ ಶಕ್ತಿ ಹೊಂದಿರುವ ಹೊಸ ಕಾರು ಎಕೆ-47 ರೈಫಲ್‌ಗಳ ದಾಳಿಯನ್ನು ಕೂಡಾ ತಡೆದುಕೊಳ್ಳಬಹುದಾಗಿದ್ದು, ಎರಡು ಮೀಟರ್‌ ಅಂತರದಲ್ಲಿ ಸುಮಾರು 15 ಕೆಜಿಯಷ್ಟು ಟಿಎನ್‌ಟಿ ಸ್ಫೋಟಗೊಂಡರೂ ಕೂಡಾ ಅದರಿಂದ ಈ ಕಾರಿಗೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡುತ್ತದೆ.

ಹಾಗೆಯೇ ಕಾರಿನ ಕಿಟಕಿಗಳ ಒಳಭಾಗದಲ್ಲಿ ಪಾಲಿಕಾರ್ಬೊನೇಟ್ ಲೇಪನವನ್ನು ನೀಡಿರುವುದರಿಂದ ಒಳಭಾಗದಲ್ಲಿರುವರಿಗೆ ನೇರ ಸ್ಫೋಟದಿಂದ ರಕ್ಷಿಸಲು ಹೆಚ್ಚು ಶಸ್ತ್ರಸಜ್ಜಿತವಾಗಿದ್ದು, ಐಷಾರಾಮಿ ಆದ ಒಳಾಂಗಣ ವಿನ್ಯಾಸ ಕೂಡಾ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಹೊಸ ಕಾರು 6 ಲೀಟರ್ ಟ್ವಿನ್ ಟರ್ಬೊ V12 ಎಂಜಿನ್ ನೊಂದಿಗೆ ಇಂಧನ ಟ್ಯಾಂಕ್‌ ಕೂಡಾ ವಿಶೇಷ ವಸ್ತುಗಳಿಂದ ನಿರ್ಮಾಣಗೊಂಡಿದ್ದು, ಸ್ಪೋಟದಿಂದ ಕಾರನ್ನು ರಕ್ಷಿಸಲು ಸಹಕಾರಿಯಾಗಿದೆ. ಬಾಂಬ್ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ಈ ವಾಹನವು ಕೂಡಲೇ ಮುಚ್ಚವುದಲ್ಲದೆ ಗರಿಷ್ಠ ಭದ್ರತೆ ಖಚಿತಪಡಿಸಲಿದ್ದು, ಟೈಯರ್‌ಗಳಿಗೆ ಹಾನಿ ಉಂಟಾದರೂ ನೂರಾರು ಕಿ.ಮೀ ನಷ್ಟು ಫ್ಲಾಟ್‌ ಟೈರ್‌ಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

Leave a Reply

error: Content is protected !!