ನೇಸರ ಜ.28: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಮತದಾರರ ಸಾಕ್ಷರತ ಸಂಘದ ವತಿಯಿಂದ ಮತದಾರರ ದಿನಾಚರಣೆಯನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ.ಕೆ.ಎನ್.ಪ್ರತಿಜ್ಞಾ ವಿಧಿ ಬೋದಿಸಿದರು.ಪ್ರಾಂಶುಪಾಲರು ಈ ದಿನದ ಆಚರಣೆಯ ಪ್ರಾಮುಖ್ಯತೆ,ಮತದಾರರ ಜವಾಬ್ದಾರಿಗಳು,ಪ್ರಜಾಪ್ರಭುತ್ವ ಯಶಸ್ಸಿಗೆ ಯುವ ಮತ್ತು ವಿದ್ಯಾವಂತ ಮತದಾರರ ಅಗತ್ಯದ ಕುರಿತು ಹಿತವಚನ ನೀಡಿದರು.
ಕಾಲೇಜಿನ ಸ್ವೀಪ್ ನೋಡಲ್ ಅಧಿಕಾರಿ ಸಲೀನ್.ಕೆ.ಪಿ.ಪ್ರಾಸ್ತಾವಿಕ ಮಾತುಗಳಲ್ಲಿ ಮತದಾರರ ದಿನಾಚರಣೆಯ ಆಚರಣೆಯ ಹಿನ್ನಲೆ ಮತ್ತು ಪ್ರಾಮುಖ್ಯತೆಯ ಕುರಿತು ತಿಳಿಸಿದರು.ಹಿರಿಯ ಉಪನ್ಯಾಸಕ ವಾಸುದೇವ ಗೌಡ,ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಅಬ್ದುಲ್ ಅಝೀಝ್,ಎನ್ಎಸ್ ಎಸ್ ಘಟಕದ ನಾಯಕ ದಯಾನಂದ,ನಾಯಕಿ ಸವಿತಾ.ಪಿ.ಟಿ ವೇದಿಕೆಯಲ್ಲಿದ್ದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಎನ್ ಎಸ್ ಎಸ್ ಸ್ವಯಂಸೇವಕರಾದ ಕುಮಾರಿ ವರ್ಷಾ ಸ್ವಾಗತಿಸಿ,ಕುಮಾರಿ ಸವಿತಾ.ಪಿ.ಟಿ ವಂದಿಸಿದರು,ಕುಮಾರಿ ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು.