ಇಚ್ಲಂಪಾಡಿ: ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿ ನಿಧನ

ಶೇರ್ ಮಾಡಿ

ನೇಸರ ಜ.29: ಕಳೆದ ಆರು ವರುಷಗಳಿಂದ ತೀವ್ರ ಕರುಳಿನ ಸಮಸ್ಯೆ ಹಾಗೂ ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕ ರುದ್ರಮಜಲು ನಿವಾಸಿ ನಂದಕುಮಾರ್(19ವ.)ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.27ರಂದು ಸಂಜೆ ನಿಧನರಾಗಿದ್ದಾರೆ.
ನೆಲ್ಯಾಡಿಯ ಕಾಲೇಜೊಂದರಲ್ಲಿ ಪ್ರಥಮ ಬಿ.ಕಾಂ.ವಿದ್ಯಾರ್ಥಿಯಾಗಿದ್ದ ನಂದಕುಮಾರ್ ಆರು ವರ್ಷಗಳಿಂದ ತೀವ್ರ ಕರುಳಿನ ಸಮಸ್ಯೆ ಹಾಗೂ ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದು,ದಿಢೀರ್ ತೀವ್ರ ಅನಾರೋಗ್ಯಕ್ಕೆ ತುತ್ತಾದ ನಂದಕುಮಾರ್ ರವರನ್ನು ಜ.25 ರಂದು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು,ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಜ.27ರಂದು ಸಂಜೆ ನಿಧನರಾಗಿದ್ದಾರೆ.ಮೃತ ಬಾಲಕ ತಂದೆ ಸುರೇಂದ್ರ ಕುಮಾರ್,ತಾಯಿ ಸಂತ ಅಂತೋನಿಸ್ ವಿದ್ಯಾಸಂಸ್ಥೆ ಉದನೆಯ ಬಿಸಿಯೂಟದ ಅಡುಗೆ ಸಹಾಯಕಿ ಶ್ರೀಮತಿ ಬಿಂದು,ಸಹೋದರ ನಿಖಿಲ್ ಕುಮಾರ್ ರವರನ್ನು ಅಗಲಿದ್ದಾರೆ.

ಸಂತಾಪ ಸೂಚನೆ: 

ವಿದ್ಯಾರ್ಥಿಯ ಸೌಮ್ಯ ಹಾಗೂ ಕಷ್ಟ ಮತ್ತು ನೋವನ್ನು ಹೇಳಿಕೊಳ್ಳದೆ ಗುರಿ ಈಡೇರಿಕೆಯ ಆತನ ಮನೋಭಾವದ ಪ್ರೇರಣದಾಯಕ ಎಂಬುದಾಗಿ ಉಲ್ಲೇಖಿಸಿ,ಮನೆಯವರಿಗೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲೆಂದು ಆಶಿಸುತ್ತಾ,ವಿಶ್ವವಿದ್ಯಾಲಯ ಘಟಕ ಕಾಲೇಜು, ನೆಲ್ಯಾಡಿಯಲ್ಲಿ ಇಂದು ಅಗಲಿದ ವಿದ್ಯಾರ್ಥಿಯನ್ನು ನೆನೆಸಿಕೊಳ್ಳುತ್ತ ಕಾಲೇಜಿನ ಪ್ರಾಚಾರ್ಯರು,ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು

Leave a Reply

error: Content is protected !!