ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಶೇರ್ ಮಾಡಿ

ನೇಸರ ಜ.29:73ನೇ ಗಣರಾಜ್ಯೋತ್ಸವವನ್ನು ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ವಿಜೃಂಭಣೆಯಿಂದ ಬೆಥನಿ ಸಮೂಹ ಸಂಸ್ಥೆಗಳಾದ ಸಫೆನಿಷಿಯ ಬೆಥನಿ,ಪದವಿಪೂರ್ವ ಕಾಲೇಜು,ಬೆಥನಿ ಐಟಿಐ ಇದರ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.ಧ್ವಜಾರೋಹಣವನ್ನು ಬೆಥನಿ ಸಮೂಹ ಸಂಸ್ಥೆಗಳ ಸಂಚಾಲಕರಾದ ರೇ.ಫಾ.ಸತ್ಯನ್ ತೋಮಸ್.OIC ಯವರು ನೆರವೇರಿಸಿ,ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ನೀಡಿದರು,ಸಫೆನಿಷಿಯ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರೇ.ಫಾ.ಮೆಲ್ವಿನ್ ಮ್ಯಾಥ್ಯು,OICಯವರು ಗಣರಾಜ್ಯೋತ್ಸವದ ಪ್ರಾಮುಖ್ಯತೆ,ಸಂವಿಧಾನ ರಚನೆಯ ಪ್ರಾಮುಖ್ಯತೆ ಹಾಗೂ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕಾಳಜಿಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು.ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗಂಗಾಧರ ಶೆಟ್ಟಿಯವರು ಗಣರಾಜ್ಯೋತ್ಸವದ ಶುಭಾಶಯವನ್ನು ಸಲ್ಲಿಸಿದರು. ಶಿಕ್ಷಕಿ ಗ್ರೇಸಿಯ ಸ್ವಾಗತಿಸಿ,ಪೂರ್ಣಿಮ ಹರೀಶ್ ವಂದಿಸಿದರು,ವಿದ್ಯಾರ್ಥಿ ಅರುನ್ ವರ್ಗಿಸ್ ಕಾರ್ಯಕ್ರಮ ನಿರೂಪಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೇ.ಫಾ.ತೋಮಸ್ ಬಿಜಿಲಿ OIC, ಉಪಪ್ರಾಂಶುಪಾಲರಾದ ಜೋಸ್.ಎಂ.ಜೆ,ಐಟಿಐ ಪ್ರಾಂಶುಪಾಲರಾದ ಸಜಿ ತೋಮಸ್,ಪಿಯುಸಿ ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್,ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಜಾರ್ಜ್.ಕೆ.ತೋಮಸ್ ಹಾಗೂ ಸಂಸ್ಥೆ ಶಿಕ್ಷಕ,ಶಿಕ್ಷಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು

Leave a Reply

error: Content is protected !!