ಜೇಸಿ.ರವಿ ಕಕ್ಕೇಪದವುರವರಿಗೆ ಗೌರವ ಡಾಕ್ಟರೇಟ್

ಶೇರ್ ಮಾಡಿ

ನೇಸರ ಜ.29: ಕಡು ಬಡತನದಲ್ಲಿ ಹುಟ್ಟಿ,ಶಿಕ್ಷಣ ವಂಚಿತರಾಗಿ,ಹೊಟ್ಟೆ ಪಾಡಿಗಾಗಿ ಕಕ್ಕೆಪದವಿನಿಂದ ಸುಬ್ರಹ್ಮಣ್ಯಕ್ಕೆ ಗಾರೆ ಕೆಲಸಕ್ಕೆ ತೆರಳಿ,ಅದೇ ವೃತ್ತಿಯಲ್ಲಿ ತನ್ನ ಸ್ವಂತ ಉದ್ಯಮವನ್ನು ಸ್ಥಾಪಿಸಿ,ಅದರಲ್ಲಿ ಸಂಪಾದಿಸಿದ ಹಣದಿಂದ ಹಲವಾರು ಬಡ ಕುಟುಂಬಗಳಿಗೆ ಮನೆ ಹಾಗೂ ತನ್ನಂತೆ ಯಾರು ಶಿಕ್ಷಣ ವಂಚಿತರಗಬಾರದು ಎಂದು ಹಲವಾರು ಬಡ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚುತ್ತಿರುವ ಜೇಸಿ.ರವಿ ಕಕ್ಕೇಪದವುರವರಿಗೆ,ಅವರ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.ಬೆಂಗಳೂರಿನ ಹೊಸೂರುನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.
ಪ್ರಶಸ್ತಿಗಳು:
ಇವರ ಸಮಾಜ ಸೇವೆಗೆ ಸತ್ಯ -ಧರ್ಮ ಜೋಡುಕರೆ ಬಯಲು ಕಂಬಳ ಮೈರ ಬರ್ಕೇಜಾಳುವಿನಲ್ಲಿ “ನಮ್ಮೂರ ಮುತ್ತು” ಪ್ರಶಸ್ತಿ,ಜೇಸಿಐ ಸಂಸ್ಥೆಯ ವಲಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ,ಆರ್ಯಭಟ ಪ್ರಶಸ್ತಿ,ಕಮಲಪತ್ರ ಪ್ರಶಸ್ತಿ ಹಲವು ಸಂಘ-ಸಂಸ್ಥೆಗಳಿಂದ ಸಮ್ಮಾನ ಮತ್ತು ಗೌರವ ಲಭಿಸಿವೆ.

Leave a Reply

error: Content is protected !!